22ರಂದು ಶಾಲಾ, ಕಾಲೇಜುಗಳಿಗೆ ರಜೆ

SHREERAMA
ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಶ್ರೀ ರಾಮಮಂದಿರ ಕಾರ್ಯಕ್ರಮದ ಧಾರ್ಮಿಕ ಸಭೆಗಾಗಿ ತಾಲೂಕಿನಾದ್ಯಂತ ಜ.22ರಂದು ಶಾಲಾ, ಕಾಲೇಜುಗಳಿಗೆ ರಜೆ ೋಷಿಸುವಂತೆ ಒತ್ತಾಯಿಸಿ ಬಿಇಒ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ನಗರಸಭೆ ಸದಸ್ಯ ವಾಸುದೇವ ನವಲಿ ಭಾನುವಾರ ಮನವಿ ಸಲ್ಲಿಸಿದರು.
Published on

ಗಂಗಾವತಿ: ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಶ್ರೀ ರಾಮಮಂದಿರ ಕಾರ್ಯಕ್ರಮದ ಧಾರ್ಮಿಕ ಸಭೆಗಾಗಿ ತಾಲೂಕಿನಾದ್ಯಂತ ಜ.22ರಂದು ಶಾಲಾ, ಕಾಲೇಜುಗಳಿಗೆ ರಜೆ ೋಷಿಸುವಂತೆ ಒತ್ತಾಯಿಸಿ ಬಿಇಒ ವೆಂಕಟೇಶ ರಾಮಚಂದ್ರಪ್ಪ ಅವರಿಗೆ ನಗರಸಭೆ ಸದಸ್ಯ ವಾಸುದೇವ ನವಲಿ ಭಾನುವಾರ ಮನವಿ ಸಲ್ಲಿಸಿದರು.

ಬಿಇಒ ಕಚೇರಿಯಲ್ಲಿ ಜ.22ರಂದು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚಿಸಿದರಲ್ಲದೇ, ರಜೆ ೋಷಿಸಲು ಸರ್ಕಾರದಿಂದ ಒಪ್ಪಿಗೆ ಪಡೆಯುವಂತೆ ಮನವಿ ಮಾಡಿದರು.

ನಗರಸಭೆ ಸದಸ್ಯ ವಾಸುದೇವ ನವಲಿ ಮಾತನಾಡಿ, ಜ.22ರಂದು ಐತಿಹಾಸಿಕ ದಿನವಾಗಿದ್ದು, 500 ವರ್ಷಗಳ ನಂತರ ವಿಜಯೋತ್ಸವ ಆಚರಿಸುತ್ತಿದ್ದೇವೆ. ಅಂದು ನಗರ ಮತ್ತು ತಾಲೂಕಿನಾದ್ಯಂತ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ಮನೆಮನೆಗಳಲ್ಲಿ ದೀಪಾರಾಧನೆ, ಭಜನೆ, ಸಾಮೂಹಿಕ ಪಾರಾಯಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ರಜೆ ೋಷಿಸಿದರೆ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಅನುಕೂಲವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net