ಹಿರೇಜಂತಕಲ್‌ನಲ್ಲಿ ತಾರಕ ಹೋಮ

Untitled design(8)
Published on

ಗಂಗಾವತಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ನಿಮಿತ್ತ ನಗರದ ಹಿರೇಜಂತಕಲ್ ಶ್ರೀ ಶಂಖು ಚಕ್ರ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ತಾರಕ ಹೋಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ವಿಶ್ವಹಿಂದು ಪರಿಷತ್, ಭಜರಂಗ ದಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆ ಆಂಜನೇಯ, ಶ್ರೀರಾಮ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಸಂಕಲ್ಪ, ಶ್ರೀರಾಮ ಪರಿವಾರದ ಕಲಶ ಸ್ಥಾಪನೆ, ರಾಮತಾರಕ, ಆಂಜನೇಯ ಸಹಸ್ರನಾಮ ಮತ್ತು ನವಗ್ರಹ ಹೋಮ, ಪೂರ್ಣಾಹುತಿ, ಮಹಿಳಾ ಭಜನಾ ಮಂಡಳಿಯಿಂದ ಭಜನೆ ಜರುಗಿದವು. ಸಾಮೂಹಿಕ ಪ್ರಸಾದ ವಿತರಣೆ ನಡೆಯಿತು. ಮಹಿಳೆಯರಿಂದ ಪಲ್ಲಕ್ಕಿ ಉತ್ಸವ, ಮತ್ತು ದೀಪೋತ್ಸವ ಜರುಗಿದವು. ಹೊಸಪೇಟೆಯ ಪ್ರತೀಕ ಕುಲ್ಕರ್ಣಿ ನೇತೃತ್ವದ ತಂಡದ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಕಾರ್ಯಕ್ರಮದ ಕುರಿತು ಭಜರಂಗ ದಳ ಜಿಲ್ಲಾ ಸಂಚಾಲಕ ವಿನಯ್ ಪಾಟೀಲ್ ಮಾಹಿತಿ ನೀಡಿದರು.

ಮುಖಂಡರಾದ ಸಂತೋಷ ಕೆಲೋಜಿ, ಲಿಂಗಪ್ಪ ದೇಸಾಯಿ, ಹನುಮಂತಪ್ಪ, ಶ್ರೀಧರ, ಸತ್ಯನಾರಾಯಣ, ಬಸವರಾಜ ಕೋರಿ, ಅಮಾತ್ಯೆಪ್ಪ, ರೂಪಾ, ಲಕ್ಷ್ಮಿ ಈಡಿಗೇರ್, ಮಂಗಳಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net