ಗಂಗಾವತಿ ಆಯುಷ್ ಆಸ್ಪತ್ರೆ ಆವರಣದಲ್ಲಿ ಕ್ಷಯ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಅಡ್ಡ ಪರಿಣಾಮ ಕುರಿತು ಜಾಗೃತಿ ಅಭಿಯಾನ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ವೈದ್ಯರಾದ ಗುರುರಾಜ್, ದೀಪ್ತಿ, ಕ್ಷಯರೋಗ ಆರೋಗ್ಯ ಸಂದರ್ಶಕ ಎಚ್.ಮಲ್ಲಿಕಾರ್ಜುನ ಇತರರಿದ್ದರು.
ಗಂಗಾವತಿ: ನಗರದ ಆಯುಷ್ ಆಸ್ಪತ್ರೆ ಆವರಣದಲ್ಲಿ ಕ್ಷಯ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಅಡ್ಡ ಪರಿಣಾಮ ಕುರಿತು ಜಾಗೃತಿ ಅಭಿಯಾನ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನೆ ಘಟಕದಿಂದ ಹಮ್ಮಿಕೊಂಡ 100 ದಿನ ಕ್ಷಯರೋಗ ನಿರ್ಮೂಲನೆ ಅಭಿಯಾನದಲ್ಲಿ, ರೋಗದ ಅಡ್ಡಪರಿಣಾಮ ಮತ್ತು ನಿಯಂತ್ರಣ ಕುರಿತು ವೈದ್ಯರಾದ ಡಾ.ಗುರುರಾಜ್ ಮತ್ತು ಡಾ. ದೀಪ್ತಿ ಮಾಹಿತಿ ನೀಡಿದರು.
ಕ್ಷಯರೋಗ ಆರೋಗ್ಯ ಸಂದರ್ಶಕ ಎಚ್.ಮಲ್ಲಿಕಾರ್ಜುನ ಮಾತನಾಡಿ, 100 ದಿನಗಳ ಅಭಿಯಾನ ನಿಮಿತ್ತ ಹಲವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಪಾಸಣೆ ಸೇರಿ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ವಿವಿಧ ಸಂಘಟನೆ ಪದಾಧಿಕಾರಿಗಳ ನೆರವಿನೊಂದಿಗೆ ಜಿಲ್ಲೆಯನ್ನು ಕ್ಷಯಮುಕ್ತವನ್ನಾಗಿ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಯಕೃತ್‌ಗೆ ಬೆಂಬಲ ನೀಡುವ ಮಾತ್ರೆಗಳನ್ನು ಉಚಿತ ವಿತರಿಸಲಾಯಿತು.
ವೈದ್ಯೆ ವೀಣಾ, ಹಿರಿಯ ಔಷಧಕಾರ ಖಾಜಾಹುಸೇನ್, ಆರೋಗ್ಯ ಕಾರ್ಯಕರ್ತೆಯರಾದ ಚಂದ್ರಕಾಂತ, ಮಂಜವ್ವ, ಚಾಂದ್‌ಬೀ, ಸುವರ್ಣಕುಮಾರಿ, ಅನಿಲ್, ರುಕಿಯಾ ಇತರರಿದ್ದರು.