ಕಾರ್ಯಕರ್ತರು ಪಕ್ಷಕ್ಕೆ ವಿಧೇಯರಾಗಿರಲಿ

birth centenary
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ನಿಮಿತ್ತ ಬಿಜೆಪಿ ವಿವಿಧ ಮೋರ್ಚಾ ದಿಂದ ಹಿರಿಯ ಕಾರ್ಯಕರ್ತ ಅನಿಲ್ ಕುಮಾರ ರಾಯ್ಕರ್ ನ್ನು ಅವರ ಗಂಗಾವತಿ ನಿವಾಸದಲ್ಲಿ ಸೋಮವಾರ ಸನ್ಮಾನಿಸಲಾಯಿತು. ಮಾಜಿ ಶಾಸಕ ಪರಣ್ಣಮುನವಳ್ಳಿ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ್ ಇತರರಿದ್ದರು.
Published on

ಗಂಗಾವತಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮಶತಮಾನೋತ್ಸವ ನಿಮಿತ್ತ ಬಿಜೆಪಿ ವಿವಿಧ ಮೋರ್ಚಾದಿಂದ ಪಕ್ಷದ ಹಿರಿಯ ಕಾರ್ಯಕರ್ತರ ಮನೆಮನೆಗೆ ಗೌರವ ಸನ್ಮಾನ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ನಗರದ ಹಿರಿಯ ಕಾರ್ಯಕರ್ತ ಅನಿಲ ರಾಯ್ಕರ್ ಮನೆಗೆ ತೆರಳಿದ ಕಾರ್ಯಕರ್ತರು, ಅವರನ್ನು ಗೌರವಿಸುವುದರೊಂದಿಗೆ ಪಕ್ಷ ಸಂಘಟನೆ ಕುರಿತು ಚರ್ಚಿಸಿದರು.

ಅನಿಲ ಕುಮಾರ ಅವರು 1978ರ ದಶಕದಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೆ ಹೆಜ್ಜೆ ಹಾಕಿದ ನೆನಪುಗಳು ಹಾಗೂ ಪಕ್ಷ ಸಂಘಟನೆಗಾಗಿ ಮಾಡಿದ ಹೋರಾಟಗಳ ಬಗ್ಗೆ ತಿಳಿಸಿ ಅವರನ್ನು ಮೊಟ್ಟಮೊದಲ ಬಾರಿಗೆ ಭೇಟಿ ಆದಾಗ ತೆಗೆಸಿಕೊಂಡ ಫೋಟೋ ಹಂಚಿಕೊಂಡರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಕ್ಷದ ಅತ್ಯಂತ ಅಮೂಲ್ಯ ರತ್ನ, ಹೆದ್ದಾರಿ ಕನಸಿನ ರೂವಾರಿ, ಅಜಾತಶತ್ರು ವಾಜಪೇಯಿ ಅವರಂತೆ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷಕ್ಕೆ ವಿಧೇಯರಾಗಿ ದುಡಿಯಬೇಕು ಎಂದು ಹೇಳಿದರು.

ನಗರ ಮಂಡಲ ಅಧ್ಯಕ್ಷ ಕಾಶೀನಾಥ ಚಿತ್ರಗಾರ, ನಗರಸಭೆ ಸದಸ್ಯ ಪರಶುರಾಮ ಮಡ್ಡೇರ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ಅರ್ಜುನ ರಾಯ್ಕರ್, ಟಿ.ಆರ್. ರಾಯಬಾಗಿ, ಶರಣಯ್ಯ ಸ್ವಾಮಿ, ಲಿಂಗರಾಜ, ರವಿ ಪವಾಡಶೆಟ್ಟಿ, ಪರಶುರಾಮ ನಾಯಕ, ಶರಣಪ್ಪ ಕಲ್ಗುಡಿ, ಮಂಜುನಾಥ ಐಲಿ, ರೇಖಾ ರಾಯಬಾಗಿ, ಹಂಪಮ್ಮ, ಅಕ್ಕಮ್ಮ, ಶಕುಂತಲಾ ಕಲ್ಲೂರ, ಸಂಗಯ್ಯ ಸ್ವಾಮಿ, ಶ್ರೀನಿವಾಸ ಧೂಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net