ದೇಶದ ಆಪತ್ತು ನಿವಾರಣೆಗೆ ವಿಶೇಷ ಪೂಜೆ

Bhogapuresh
ಕನಕಗಿರಿ ತಾಲೂಕಿನ ನವಲಿ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಾಲಯದಲ್ಲಿ ಕಂಬದ ಮೂರ್ತಿಗೆ ಗಂಧ ಲೇಪನ ಮಾಡಿ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಗಂಗಾವತಿ: ಕನಕಗಿರಿ ತಾಲೂಕಿನ ನವಲಿಯ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಾಲಯದಲ್ಲಿ ಭಾರತ-ಪಾಕ್ ಯುದ್ಧ ಹಿನ್ನೆಲೆ ಸೈನಿಕರಿಗೆ ವಿಶೇಷ ಬಲ ಮತ್ತು ದೇಶಕ್ಕೆ ಎದುರಾದ ಆಪತ್ತು ನಿವಾರಣೆಗೆ ವಿಶೇಷ ಪೂಜೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ದೇಶವಾಸಿಗಳಿಗೆ ಆತಂಕ ನಿವಾರಣೆಯ ಹರಕೆ ಹೊತ್ತು ವಿಶೇಷ ಪೂಜೆ ನೆರವೇರಿಸುವ ಮೂಲಕ ಶ್ರೀ ನರಸಿಂಹ ಜಯಂತ್ಯುತ್ಸವ ಆಚರಿಸಲಾಯಿತು.

ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂರ್ತಿಗೆ ಮಧು, ಪಂಚಾಮತಾಭಿಷೇಕ, ವಿಶೇಷ ಹೂವಿನಲಂಕಾರ, ನರಸಿಂಹ ಜಯಂತಿ ಪ್ರಯುಕ್ತ ಕಂಬದ ನರಸಿಂಹಸ್ವಾಮಿಗೆ ಗಂಧಲೇಪನದ ಮೂಲಕ ಅಲಂಕಾರ ಮಾಡಿ ದೇಶದ ಹಿತದ ಪ್ರಾರ್ಥನೆ ಸಲ್ಲಿಸಲಾಯಿತು. ನರಸಿಂಹ ಜಯಂತ್ಯುತ್ಸವದ ಸೇವೆಯನ್ನು ಸೌದಿ ಕುಟುಂಬದವರು ಸಲ್ಲಿಸಿದರು.

ದೇವಾಲಯದ ಪರ್ಯಾಯಸ್ಥ ಅರ್ಚಕ ಅಚ್ಯುತಾಚಾರ ಪೂಜಾರ ನವಲಿ, ಉಪತಹಸೀಲ್ದಾರ್ ವಿಜಯಕುಮಾರ್ ಗುಂಡೂರು, ವಿಪ್ರ ಸಮಾಜದ ಮುಖಂಡರಾದ ನಾರಾಯಣರಾವ್ ಕುಲ್ಕರ್ಣಿ, ಕಿರಣ್ ಸೌದಿ, ಪ್ರದೀಪ ಸೌದಿ, ಪವನ ಸೌದಿ,ಸುಧೀಂದ್ರ, ವಿಜಯ ಹುಲಿಹೈದರ್, ಹನುಮಂತರಾವ್ ಗುನ್ನಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net