ಅಂಜನಾದ್ರಿ ಹುಂಡೀಲಿ 33.79ಲಕ್ಷ ರೂ. ಸಂಗ್ರಹ

ANJANADRI HUNDI
ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಾಲಯದಲ್ಲಿ ಹುಂಡಿ ಹಣ ಎಣಿಕೆ ಮಾಡುತ್ತಿರುವ ಮುಜರಾಯಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ.
Published on

ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಾಲಯ ಹುಂಡಿಯಲ್ಲಿ 33.79ಲಕ್ಷ ರೂ. ಸಂಗ್ರಹವಾಗಿದ್ದು, ನಾಲ್ಕು ವಿದೇಶಿ ನಾಣ್ಯಗಳು ಕಂಡು ಬಂದಿವೆ. ಮುಜರಾಯಿ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ದೇವಾಲಯದಲ್ಲಿ ಗುರುವಾರ ಹುಂಡಿ ಹಣ ಎಣಿಕೆಮಾಡಲಾಯಿತು. 5

8 ದಿನಗಳಲ್ಲಿ 33,79,910 ರೂ. ಸಂಗ್ರಹವಾಗಿದ್ದು, ಯುಎಇ 2, ಬ್ರೆಜಿಲ್ ಮತ್ತು ಯುಎಸ್‌ಎ ತಲಾ ಒಂದು ನಾಣ್ಯಗಳಿವೆ. ಭದ್ರತೆ ಉದ್ದೇಶದಿಂದ ತಿಂಗಳಿಗೊಮ್ಮೆ ಹುಂಡಿ ಹಣ ಎಣಿಕೆ ಮಾಡಲಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ ಮಾಹಿತಿ ನೀಡಿದರು. ಪೊಲೀಸ್ ಬಂದೊಬಸ್ತ್, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಹಣ ಎಣಿಕೆ ನಡೆಯಿತು. ಕಳೆದ ಬಾರಿ ಹುಂಡಿ ತೆರೆದಾಗ 36.96 ಲಕ್ಷ ರೂ. ಸಂಗ್ರವಾಗಿತ್ತು.

ಶಿರಸ್ತೇದಾರಾದ ಕಷ್ಣವೇಣಿ, ಸುಹಾಸ್, ಆರ್‌ಐ ಹಾಲೇಶ ಗುಂಡಿ, ವಿಷಯ ನಿರ್ವಾಹಕರಾದ ಶ್ರೀಕಂಠೇಶ, ಗುರುರಾಜ, ಇಂದಿರಾ, ಮಂಜುನಾಥ, ಅನ್ನಪೂರ್ಣ, ಶೇಖರಪ್ಪ, ಗಾಯತ್ರಿ, ಶ್ರೀರಾಮ ಜೋಶಿ, ಸುಧಾ, ನಾಗವೇಣಿ, ಗ್ರಾಮ ಲೆಕ್ಕಾಧಿಕಾರಿಗಳಾದ ಪೂಜಾ, ರಾಜು ಭಜಂತ್ರಿ, ಮಂಜುನಾಥ ದುಮ್ಮಾಡಿ, ವೀರಯ್ಯ, ರಾಘವೇಂದ್ರ, ವ್ಯವಸ್ಥಾಪಕ ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net