ಲೋಕಕಲ್ಯಾಣಾರ್ಥ ವಿಶೇಷ ಪೂಜೆ-ಹೋಮ

MERAVANIGE
ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಗಂಗೆ ಕಲಶ ಮೆರವಣಿಗೆ ಗುರುವಾರ ಜರುಗಿತು. ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ವ್ಯವಸ್ಥಾಪಕ ರಾಜಣ್ಣ ಸ್ವಾಮಿ, ರಾಜವಂಶಸ್ಥರಾದ ರಾಜಾ ಶ್ರೀಕೃಷ್ಣದೇವರಾಯಲು, ರತ್ನಶ್ರೀ ದೇವರಾಯಲು ಇತರರಿದ್ದರು.
Published on

ಗಂಗಾವತಿ: ಆನೆಗೊಂದಿಯ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವಕ್ಕೆ ಗುರುವಾರ ಚಾಲನೆ ನೀಡಲಾಯಿತು.

ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ ಮತ್ತು ಹೋಮ ಹಮ್ಮಿಕೊಳ್ಳಲಾಗಿದ್ದು, ಆರಂಭದ ದಿನದಂದು ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಪೂಜೆ ಕೈಗೊಳ್ಳಲಾಯಿತು. ಇದಕ್ಕೂ ಮುನ್ನ ಗಂಗೆ, ಗಣಪತಿ, ಗೋಪೂಜೆ, ಕಲಶಸ್ಥಾಪನೆಯೊಂದಿಗೆ 9ದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಈ ಕುರಿತು ದೇವಾಲಯ ಆಡಳಿತ ಮಂಡಳಿ ವ್ಯವಸ್ಥಾಪಕ ರಾಜಣ್ಣ ಸ್ವಾಮಿ ಮಾತನಾಡಿದರು. ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ರಾಜವಂಶಸ್ಥರಾದ ರಾಜಾ ಶ್ರೀಕೃಷ್ಣದೇವರಾಯಲು, ರತ್ನಶ್ರೀ ದೇವರಾಯಲು ಇತರರು ಭಾಗವಹಿಸಿದ್ದರು.

ಬನ್ನಿಮಹಾಂಕಾಳಿ ದೇವಾಲಯ: ನಗರದ 7ನೇ ವಾರ್ಡ್ ಶ್ರೀ ಬನ್ನಿ ಮಹಾಂಕಾಳಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ವಿಶೇಷ ಪೂಜೆಗೆ ಚಾಲನೆ ನೀಡಲಾಯಿತು. ದೇವಾಲಯದಿಂದ ಕುಂಭ ಮೆರವಣಿಗೆ ಹಮ್ಮಿಕೊಂಡಿದ್ದು, ಮೂರ್ತಿಗೆ ಅಭಿಷೇಕ, ಕುಂಕುಮಾರ್ಚನೆ ಮತ್ತು ಅಲಂಕಾರ ಕೈಗೊಳ್ಳಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮುಖಂಡರಾದ ಪಂಪಾಪತಿ, ಸಂಗಯ್ಯಸ್ವಾಮಿ, ಗಣೇಶ, ಬಸವರಾಜ, ಪುಂಡಲೀಕ, ಶಿವಣ್ಣ ಇತರರಿದ್ದರು.

ವಡ್ಡರಹಟ್ಟಿ: ವಡ್ಡರಹಟ್ಟಿಯ ಶ್ರೀ ಅಂಬಾಭವಾನಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ ಪಂಚ ಕಮಿಟಿಯಿಂದ ವಿಶೇಷ ಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದ ಮುಖಂಡರಾದ ಯಮುನಸಾ ವೈ ಜರಾತರಗರ್, ಟಿ.ಆರ್.ರಾಯಭಾಗಿ, ಶ್ಯಾಮಸುಂದರ್‌ಸಾ ರಾಯಭಾಗಿ, ಮಾದೂಸಾ ಮೆಹರವಾಡೆ, ಅಂಬಾಸ್ ಕೆ.ಶಿಂಗ್ರಿ, ಮಂಜುನಾಥ ರಂಗ್ರೇಜ್, ಅಂಬಾಸ್ ಎಸ್.ಶಿಂಗ್ರಿ, ಜಗದೀಶ ರಾಯಭಾಗಿ, ಗುರು ಮೆಹರವಾಡೆ, ರಾಮುಬಾಕಳೆ, ವಿಜಯ ಅರವಟಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net