ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ ಸಂಪನ್ನ; ಶ್ರೀ ಸತ್ಯಾತ್ಮತೀರ್ಥರಿಂದ ಪೂಜಾ ಕೈಂಕರ್ಯ

gangavathi vagishathira aradhane
ಗಂಗಾವತಿ ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ ನಿಮಿತ್ತ ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥರು ವಿಶೇಷ ಪೂಜೆ ನೆರವೇರಿಸಿದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡಿಯಲ್ಲಿ ಉತ್ತರಾದಿಮಠದಿಂದ ಶ್ರೀ ವಾಗೀಶ ತೀರ್ಥರ ಉತ್ತರಾರಾಧನೆ ಭಾನುವಾರ ಜರುಗಿತು.

ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಬೆಳಗ್ಗೆ ದಂಡೋದಕ ಸ್ನಾನ, ಶ್ರೀಮನ್ಯಾಯಸುಧಾ ಪಾಠ, ತಪ್ತಮುದ್ರಾಧಾರಣೆ, ಸೀತಾ ಸಮೇತ ಶ್ರೀ ದಿಗ್ವಿಜಯ ಮೂಲರಾಮ ದೇವರ ಸಂಸ್ಥಾನ ಪೂಜೆ, ಪಂಡಿತರಿಂದ ಉಪನ್ಯಾಸ ನಡೆಯಿತು. ಶ್ರೀ ವಾಗೀಶ ತೀರ್ಥರ ಮೂಲ ವೃಂದಾವನ ಸೇರಿ ಎಲ್ಲ ವೃಂದಾವನಕ್ಕೂ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ವಿಶೇಷ ಪೂಜೆ, ಅಷ್ಟೋತ್ತರ ಪಾರಾಯಣ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಲ ಮಂತ್ರಾಕ್ಷತೆ ವಿತರಣೆ ಜರುಗಿತು.

ಶ್ರೀ ವಾಗೀಶ ತೀರ್ಥರ ಮಹಿಮೆ ಕುರಿತು ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಉತ್ತರಾದಿ ಮಠದ ಪ್ರತಿನಿಧಿಗಳಾದ ಆನಂದಾಚಾರ್, ರಾಮಾಚಾರ್ ಉಮರ್ಜಿ, ಆನಂದಾಚಾರ್ ಮಹಿಶಿ, ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಸನ್ನಾಚಾರ್ಯ ಕಟ್ಟಿ, ಅಡವಿರಾವ್ ಕಲಾಲಬಂಡಿ, ಅನಂತರಾವ್ ಜಾಲಿಹಾಳ, ವೆಂಕಟೇಶ ಕೇಸಕ್ಕಿ ಸೇರಿ ವಿವಿಧ ಜಿಲ್ಲೆಯ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net