ಶಿಷ್ಟಾಚಾರ ಉಲ್ಲಂಘಿಸಿದಕ್ಕೆ ಸಿಎಂಗೆ ಪತ್ರ

LATTER
ಆನೆಗೊಂದಿ ಗ್ರಾಪಂ ಅಧ್ಯಕ್ಷೆ ಕೆ.ಮಹಾದೇವಿ ತಿಮ್ಮಪ್ಪ ಬಾಳಿಕಾಯಿ ಸಿಎಂಗೆ ಬರೆದ ಪತ್ರ.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಪಂ ಕಚೇರಿಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಅಧಿಕಾರಿಗಳೇ ಸಹಕಾರ ನೀಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಕೆ.ಮಹಾದೇವಿ ತಿಮ್ಮಪ್ಪ ಬಾಳಿಕಾಯಿ ತಿಳಿಸಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯಗೆ ದೂರು ನೀಡಿದ್ದು, ಸಂವಿಧಾನಾತ್ಮಕವಾಗಿ ಬಂದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಅಪಮಾನ ಎಸಗಿದ್ದಾರೆ. ಅ.15ರಂದು ಆಯೋಜಿಸಿದ್ದ ಸಭೆಯಲ್ಲಿ ಸಂವಿಧಾನತ್ಮಕ ಹುದ್ದೆಯಲ್ಲಿರುವರಿಗೆ ಮಾತ್ರ ಅವಕಾಶವಿದ್ದರೂ, ಯಾವುದೇ ಸ್ಥಾನಮಾನವಿಲ್ಲದ ರಾಜವಂಶಸ್ಥೆ ರಾಣಿ ರತ್ನಶ್ರೀರಾಯಲು ಅವರನ್ನು ಅಧ್ಯಕ್ಷ ಆಸನದಲ್ಲಿ ಕೂರಲು ಅವಕಾಶ ನೀಡಿದ್ದು ಸರಿಯಲ್ಲ.

ಸಾಮಾನ್ಯಸಭೆ ಶಿಷ್ಟಾಚಾರದ ಬಗ್ಗೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಮತ್ತು ತಾಪಂ ಇಒ ಲಕ್ಷ್ಮೀದೇವಿ ಯಾದವ್‌ಗೆ ಗೊತ್ತಿದ್ದರೂ ಅವಕಾಶ ನೀಡುವ ಮೂಲಕ ಶಿಷ್ಟಾಚಾರ ಉಲ್ಲಂಸಿದ್ದಾರೆ. ಗ್ರಾಪಂಗೆ ಜಾಗ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಗ್ರಾಪಂ ಆಡಳಿತದಲ್ಲಿ ರಾಜಮನೆತನದ ಕೆಲವರ ಹಸ್ತಕ್ಷೇಪ ಹೆಚ್ಚುತ್ತಿದ್ದು, ಆಡಳಿತ ಯಂತ್ರ ನಿಯಂತ್ರಣದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ. ಗ್ರಾಪಂ ಆಡಳಿತ ವ್ಯವಸ್ಥೆಯಲ್ಲಿ ಭಾಗಿಯಾಗುತ್ತಿರುವುದು ಕಾನೂನು ಬಾಹೀರವಾಗಿದ್ದು, ಅವಕಾಶ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಸಿಎಂಗೆ ಪತ್ರ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net