ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಗಂಗಾವತಿಯ ಪ್ರಾಪರ್ ಶಾಲೆ ಸ್ಥಾನ

12092022 gangavathi proper school award
Published on


ಗಂಗಾವತಿ, ಸ್ವಾತಂತ್ರ್ಯದ ಅಮೃತ ಮಹೋತ್ಸವ, ಸಮಾಹಿ ಪ್ರಾಥಮಿಕ ಶಾಲೆ (ಪ್ರಾಪರ್), ಪರಿಸರ ರಕ್ಷಣೆ ಸಸಿ ನೆಡುವ ಕಾರ್ಯಕ್ರಮ, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌,

ಗಂಗಾವತಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ನಗರದ ಸಮಾಹಿ ಪ್ರಾಥಮಿಕ ಶಾಲೆ (ಪ್ರಾಪರ್)ಯಲ್ಲಿ ಆಯೋಜಿಸಿದ್ದ ಪರಿಸರ ರಕ್ಷಣೆ ಸಸಿ ನೆಡುವ ಕಾರ್ಯಕ್ರಮ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ (ಕೆಎಬಿಆರ್)ನಲ್ಲಿ ಸ್ಥಾನ ಪಡೆದುಕೊಂಡಿದೆ. 6 ಶಾಲೆಗಳ ಮುಖ್ಯಸ್ಥರ ಮಾರ್ಗದರ್ಶನದಲ್ಲಿ 75 ವಿವಿಧ ಬಗೆಯ ಸಸಿಗಳನ್ನು ಶಾಲಾವರಣದಲ್ಲಿ ನೆಡಲಾಗಿತ್ತು. ಇದಕ್ಕೆ ಜೆಎಂಎ್ಸಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೆ ಮತ್ತು ಬಿಇಒ ಸೋಮಶೇಖರಗೌಡ ತಿಪ್ಪನಾಳ್ ಸಾಕ್ಷಿಯಾಗಿದ್ದರು. ಪರಿಸರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿದ್ದು, ದಾಖಲೆಯಾದ ಪ್ರಮಾಣಪತ್ರ ಶಾಲೆಗೆ ತಲುಪಿದೆ ಎಂದು ಶಿಕ್ಷಕ ಶ್ರೀಧರ ತಳವಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net