ಮಹಿಳೆಯರ ಸಬಲತೆಗೆ ಆದ್ಯತೆ

UDGHATANE
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಬುಧವಾರ ಉದ್ಘಾಟಿಸಿದರು. ಸಂಪನ್ಮೂಲವ್ಯಕ್ತಿ ಲಲಿತಾ ನಾರಾಯಣ ಕಂದಗಲ್, ಸಮನ್ವಯಾಧಿಕಾರಿ ಶಾರದಾ ಇತರರಿದ್ದರು.
Published on

ಗಂಗಾವತಿ: ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶ್ರೀಮಹಾಲಕ್ಷ್ಮೀ ಜ್ಞಾನ ವಿಕಾಸ ಕೇಂದ್ರದ ವಿಶೇಷ ಸಭೆ ಬುಧವಾರ ಹಮ್ಮಿಕೊಳ್ಳಲಾಗಿತ್ತು. ಅಮರ ಭಗತ್‌ಸಿಂಗ್ ನಗರ ವಲಯ ವ್ಯಾಪ್ತಿಯಲ್ಲಿ ಬರುವ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ವಾರದ ಸಭೆ, ಮಾಸಿಕ ವರದಿ, ದಾಖಲಾತಿ ನಿರ್ವಹಣೆ ಮತ್ತು ಸಂಸ್ಥೆಯ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ನೀಡಲಾಯಿತು.

ಸಂಸ್ಥೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಸಮುದಾಯದ ಸಹಭಾಗಿತ್ವದಲ್ಲಿ ಸಂಸ್ಥೆ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಆರ್ಥಿಕ ಸುಧಾರಣೆ ಜತೆಗೆ ಧಾರ್ಮಿಕ ಮತ್ತು ಸಮಾಜಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಂಪನ್ಮೂಲವ್ಯಕ್ತಿ ಲಲಿತಾ ನಾರಾಯಣ ಕಂದಗಲ್ ಮಾತನಾಡಿ, ಶಿಕ್ಷಣದ ಮೂಲಕ ಸೌಲಭ್ಯಗಳನ್ನು ಪಡೆಯಬೇಕಿದ್ದು, ಸಂಸ್ಥೆಯ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕೇಂದ್ರದ ಅಧ್ಯಕ್ಷೆ ಮಹಾದೇವಮ್ಮ, ವಲಯ ಮೇಲ್ವಿಚಾರಕಿ ನಾಗಮಣಿ, ಸಮನ್ವಯಾಧಿಕಾರಿ ಶಾರದಾ, ಸೇವಾ ಪ್ರತಿನಿಧಿ ಶ್ರೀದೇವಿ ಹಾಗೂ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net