ಅಧಿಕ ಮಾಸ ಹಿನ್ನೆಲೆ ಶ್ರೀಪುರಷೋತ್ತಮ ಯಾಗ

Gangavati Sripurashottama Yaga
ಲೋಕಕಲ್ಯಾಣಕ್ಕಾಗಿ ಗಂಗಾವತಿ ಜವಾಹರ ನಗರದ ಶ್ರೀಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಅಧಿಕ ಮಾಸದ ನಿಮಿತ್ತ ಶ್ರೀಪುರಷೋತ್ತಮ ಯಾಗ ಭಾನುವಾರ ನಡೆಯಿತು.
Published on

ಗಂಗಾವತಿ: ಲೋಕಕಲ್ಯಾಣಕ್ಕಾಗಿ ನಗರದ ಜವಾಹರ ನಗರದ ಶ್ರೀಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಅಧಿಕ ಮಾಸದ ನಿಮಿತ್ತ ಶ್ರೀಪುರಷೋತ್ತಮ ಯಾಗ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಅಧಿಕ ಮಾಸ ಹಿನ್ನೆಲೆ ನಿತ್ಯವೂ ವಿದ್ವಾಂಸರಿಂದ ಪ್ರವಚನ ಹಮ್ಮಿಕೊಂಡಿದ್ದು, ಬೆಳಗ್ಗೆ ವಿಶೇಷ ಪೂಜೆ, ಸಂಕಲ್ಪ, ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು. ಪ್ರದೀಪ್‌ಚಾರ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ವಿಪ್ರ ಸಮಾಜದ ಹಿರಿಯ ಮುಖಂಡ ಕಿಶನ್ ರಾವ್‌ಕುಲ್ಕರ್ಣಿ, ಕಲಬುರಗಿ ಪೀಠಕ್ಕೆ ನಿಯೋಜನೆಗೊಂಡ ಅಡ್ವೊಕೇಟ್ ಜನರಲ್ ಮಲ್ಹಾರಾವ್‌ಲಾಯದುಣಸಿ ಮತ್ತು ಪಿಎಸೈ ಕೆ.ಕಾಮಣ್ಣರನ್ನು ದೇವಾಲಯದ ವಿಶ್ವಸ್ಥ ಮಂಡಳಿಯಿಂದ ಸನ್ಮಾನಿಸಲಾಯಿತು. ತಿಂಗಳ ಪರ್ಯಂತ ಹಮ್ಮಿಕೊಂಡ ಜ್ಞಾನಸತ್ರದ ಕುರಿತು ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಕುಲ್ಕರ್ಣಿ ಮಾತನಾಡಿದರು.

ವಿಪ್ರ ಸಮಾಜದ ತಾಲೂಕು ಅಧ್ಯಕ್ಷ ಮೇಗೂರು ರಾಘವೇಂದ್ರ, ಹಿರಿಯ ಮುಖಂಡರಾದ ಆಲ್ಲಂಪಲ್ಲಿ ತಿರುಮಲರಾವ್, ಪ್ರಸನ್ನ ರಾಂಭಟ್ ಜೋಶಿ, ಲೆಕ್ಕಿಹಾಳ್ ರಾಘವೇಂದ್ರ, ರಾಮಕೃಷ್ಣ ಕನಸಾವಿ, ಕೋಮಲಾಪುರ ಪ್ರಹ್ಲಾದರಾವ್, ಆಲ್ಲಂಪಲ್ಲಿ ನರಸಿಂಹಮೂರ್ತಿ, ರಂಗನಾಥ ವಟಗಲ್, ಶೇಷಗಿರಿ ಕುಲ್ಕರ್ಣಿ, ರವಿವೀರಾಪುರ,ಗೋಪಿನಾಥ ದಿನ್ನಿ, ವಿ.ಸತ್ಯಕುಮಾರ, ಮರಳಿ ಗುರುರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net