

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಾಜಿ ರಾಷ್ಟ್ರಪತಿ ದಿ. ಡಾ.ಎಪಿಜೆ ಅಬ್ದುಲ್ ಕಲಾಂ ಜಯಂತ್ಯುತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಸರಳತೆಯಿಂದ ಶ್ರೇಷ್ಠತೆಡೆಗೆ ಪಯಣಿಸಿದ ಅಪ್ರತಿಮ ದೇಶಪ್ರೇಮಿ ಅಬ್ದುಲ್ ಕಲಾಂ ಸಾಧನೆ ಅಮೋಘವಾಗಿದೆ. ನನ್ನ ಜನುಮದಿನಕ್ಕೂ, ಪುಣ್ಯತಿಥಿಗೂ ರಜೆ ನೀಡಬೇಡಿ ನನ್ನನ್ನು ಹಾಗೂ ದೇಶವನ್ನು ಪ್ರೀತಿಸಿ ಗೌರವಿಸುವುದಾದರೆ ಹೆಚ್ಚು ಕೆಲಸ ಮಾಡಿ ಎಂದು ಹೇಳುವ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದರು.
ಡಾ.ಕಲಾಂ ಆಶಯದಂತೆ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಎನ್ನೆಸ್ಸೆಸ್ ಘಟಕದಿಂದ ಶ್ರಮದಾನ, ಯಂತ್ರೋಪಕರಣಗಳ ಮೂಲಕ ಮೈದಾನ ಸಮತಟ್ಟು ಮಾಡಲಾಯಿತು. ಅಂತಾರಾಷ್ಟ್ರೀಯ ಕೈ ತೊಳೆಯುವ ದಿನ ಮತ್ತು ತಂಬಾಕು ವಿರೋಧಿ ದಿನ ಹಮ್ಮಿಕೊಂಡಿದ್ದು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಉಪಯುಕ್ತ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶ್ರೀರಾಮನಗರದ ಕ್ಲೀನ್ ಆ್ಯಂಡ್ ಗ್ರೀನ್ ೆರ್ಸ್‌ನಿಂದ ಕಾಲೇಜು ಮೈದಾನದಲ್ಲಿ ಸಸಿಗಳನ್ನು ನೆಡಲಾಯಿತು.
ಸಮುದಾಯ ಆರೋಗ್ಯ ಕೇಂದ್ರದ ನಿರೀಕ್ಷಣಾಧಿಕಾರಿ ಎಚ್.ಎಂ.ಗುರುರಾಜ್, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಂ. ಶಂಕ್ರಪ್ಪ, ಡಾ.ಸರ್ರಾಜ್ ಅಹ್ಮದ್, ಕೆ.ವಿರೂಪಾಕ್ಷ, ಡಾ.ಶಶಿಕುಮಾರ, ರವಿಕುಮಾರ, ವೆಂಕಟರಾಜು, ಈಶಪ್ಪ ಮೇಟಿ, ವಿಜಯಕುಮಾರ, ಡಾ.ಅರ್ಜುನ್, ನಂದಕುಮಾರ, ಪರಶುರಾಮ, ಪೀರಾವಲಿ, ಗ್ರಂಥಪಾಲಕ ಡಾ.ದೇವರಾಜ, ಸಿಬ್ಬಂದಿ ಜಬೀನಾ ಬೇಗಂ, ವಿನಾಯಕ, ಶಾಂತಿ, ಚಿನ್ನ ವರಪ್ರಸಾದ್, ಶರಣ, ಸಾಂಸ್ಕೃತಿಕ ಸಂಚಾಲಕ ವೀರೇಶ, ಹಳೇ ವಿದ್ಯಾರ್ಥಿಗಳಾದ ಅಶೋಕ, ಶಿವರಾಜಕುಮಾರ್ ಇತರರಿದ್ದರು.