

ಗಂಗಾವತಿ: ಸಹಕಾರಿ ಕಾಯ್ದೆ ಅನ್ವಯ ಆಡಳಿತ ನಿರ್ವಹಿಸಬೇಕಿದ್ದು, ಕಾನೂನಿನ ಚೌಕಟ್ಟಿನಲ್ಲಿ ಸಂಸ್ಥೆಗಳನ್ನು ಬೆಳೆಸುವಂತೆ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಜಿ.ಶ್ರೀಧರ್ ಕೇಸರಹಟ್ಟಿ ಸಲಹೆ ನೀಡಿದರು.
ನಗರದ ಲಲಿತಮಹಲ್ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದಿಂದ ಇತ್ತೀಚಿಗೆ ನೋಂದಣಿಯಾಗಿರುವ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಸಿಇಒಗಳಿಗಾಗಿ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ಸೌಹಾರ್ದ ಸಹಕಾರಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೆಳಗಾವಿ ನಂತರ ಅತಿ ಹೆಚ್ಚು ಸಹಕಾರಿ ಸಂಸ್ಥೆಗಳನ್ನು ಹೊಂದಿರುವುದು ಕೊಪ್ಪಳ ಜಿಲ್ಲೆ. ಹಣಕಾಸು ನಿರ್ವಹಣೆ ಸಂದರ್ಭದಲ್ಲಿ ಎಚ್ಚರಿಕೆಯಿಂದ ನಿಭಾಯಿಸಬೇಕಿದ್ದು, ಆರಂಭದಿಂದಲೇ ಕಾನೂನು, ಕಾಯ್ದೆ ಪಾಲಿಸಬೇಕಿದೆ ಎಂದರು.
ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ ರಾಕಲೇ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ನಿರ್ವಹಣೆಗಾಗಿ ಕಾಲಕಾಲಕ್ಕೆ ತರಬೇತಿ ಆಯೋಜಿಸಲಾಗುತ್ತಿದ್ದು, ಕಾನೂನಿನ ಅರಿವು ನೀಡಲಾಗುತ್ತಿದೆ ಎಂದರು.
ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಪೂರ್ವ ಸಿದ್ಧತೆ ಕುರಿತು ಸಂಪನ್ಮೂಲ ವ್ಯಕ್ತಿ ವಿನಾಯಕ, ಉಪನ್ಯಾಸ ನೀಡಿದರು. ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ್, ನಿರ್ದೇಶಕ ಕೊಮಾರೆಪ್ಪ, ಅಭಿವದ್ಧಿ ಅಧಿಕಾರಿ ಓಂಕಾರ ಇದ್ದರು.