ಕಲಾ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ ಹೆಚ್ಚು

SABHE
ಗಂಗಾವತಿ ಹಿರೇಜಂತಕಲ್ ಶ್ರೀ ಪಂಪಾವಿರೂಪಾಕ್ಷೇಶ್ವರ ದೇವಾಲಯದಲ್ಲಿ ಗಂಗಾವತಿ ಚಿತ್ರದ ಚಿತ್ರೀಕರಣಕ್ಕೆ ಮಾಜಿ ಶಾಸಕ ಜಿ.ವೀರಪ್ಪ ಶುಕ್ರವಾರ ಚಾಲನೆ ನೀಡಿದರು. ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ಕಲಾವಿದರಾದ ನಾಗರಾಜ ಇಂಗಳಗಿ, ವಿಷ್ಣುತೀರ್ಥ ಆದಾಪುರ ಇತರರಿದ್ದರು.
Published on

ಗಂಗಾವತಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭೆಗಳು ಸಾಕಷ್ಟಿದ್ದು, ವೇದಿಕೆ ಒದಗಿಸಿದಾಗ ನಿಜವಾದ ಸಾಮರ್ಥ್ಯ ಗೊತ್ತಾಗಲಿದೆ ಎಂದು ಮಾಜಿ ಶಾಸಕ ಜಿ.ವೀರಪ್ಪ ಹೇಳಿದರು.

ನಗರದ ಹಿರೇಜಂತಕಲ್ ಶ್ರೀ ಪಂಪಾವಿರೂಪಾಕ್ಷೇಶ್ವರ ದೇವಾಲಯದಲ್ಲಿ ನಗರದ ಪ್ರತಿಬಿಂಬ ಸಿನಿ ಪ್ರೊಡಕ್ಷನ್ಸ್ ನಿಂದ ತಯಾರಿಸುತ್ತಿರುವ ಗಂಗಾವತಿ ಚಿತ್ರದ ಚಿತ್ರೀಕರಣಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಕಲಾ ಸಾಮರ್ಥ್ಯ ಪ್ರದರ್ಶನಕ್ಕೆ ಸಾಕಷ್ಟು ಅವಕಾಶಗಳಿದ್ದು, ಸ್ಥಳೀಯ ಪ್ರತಿಭೆಗಳು ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದರು.

ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ, ಸ್ಥಳೀಯ ಕಲಾವಿದರೇ ಅಭಿನಯಿಸುತ್ತಿರುವ ಹೊಸ ಚಿತ್ರದಲ್ಲಿ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸುವಂತೆ ಸಲಹೆ ನೀಡಿದರು.

ಚಿತ್ರದ ಬಜೆಟ್, ಚಿತ್ರೀಕರಣ ಪ್ರದೇಶ ಮತ್ತು ಕಲಾವಿದರ ಕುರಿತು ಕಲಾವಿದ ನಾಗರಾಜ ಇಂಗಳಗಿ ಮಾಹಿತಿ ನೀಡಿದರು. ಕಲಾವಿದರ ಮೊದಲ ಅಭಿನಯಕ್ಕೆ ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಚಾಲನೆ ನೀಡಿದರು. ನಿರ್ದೇಶಕ ಎಂ.ಡಿ.ಬಸವರಾಜ್, ಕಲಾವಿದರಾದ ವಿಷ್ಣುತೀರ್ಥ ಆದಾಪುರ, ವಿರೂಪಾಕ್ಷಪ್ಪ ಸಿರಿಗೇರಿ, ಮಂಜುನಾಥ ಸಿರಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net