ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್

additional bus
ಸಿದ್ದಾಪುರದಿಂದ ಗಂಗಾವತಿವರೆಗಿನ ಸಂಚಾರಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಾಲೂಕಿನ ಶ್ರೀರಾಮನಗರ ಪ್ರಯಾಣಿಕ ತಂಗುದಾಣದ ಬಳಿ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಲಾಯಿತು.ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಗ್ರಾಪಂ ಅಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷೆ ಹುಸೇನ್‌ಬೀ, ಸದಸ್ಯರಾದ ರೆಡ್ಡಿ ವೀರರಾಜು, ಪಿ.ರಾಮಕಷ್ಣ ಇತರರಿದ್ದರು.
Published on
ಗಂಗಾವತಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿದ್ದಾಪುರದಿಂದ ಗಂಗಾವತಿ ವರೆಗಿನ ಸಂಚಾರಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಾಲೂಕಿನ ಶ್ರೀರಾಮನಗರ ಪ್ರಯಾಣಿಕ ತಂಗುದಾಣದ ಬಳಿ ಪೂಜೆ ಸಲ್ಲಿಸುವ ಮೂಲಕ ಬುಧವಾರ ಚಾಲನೆ ನೀಡಲಾಯಿತು.

ಶ್ರೀರಾಮನಗರ ಸುತ್ತ್ತಲಿನ ಗ್ರಾಮಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಗಂಗಾವತಿ ಅವಲಂಭಿತರಾಗಿದ್ದು, ಬಸ್ ಸಂಚಾರದ ಅನನುಕೂಲತೆಯಿಂದ ತೊಂದರೆಯಾಗಿತ್ತು. ಗ್ರಾಮಸ್ಥರು ಕೆಕೆಆರ್‌ಟಿಸಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಹೆಚ್ಚುವರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿದ್ದಾಪುರ, ಶ್ರೀರಾಮನಗರ, ಮರಳಿ ಮತ್ತು ಗಂಗಾವತಿ ಮಾರ್ಗದ ಹೆಚ್ಚುವರಿ ಬಸ್ ಸಂಚಾರ ಕಲ್ಪಿಸಿದ್ದು, ಸ್ಥಳೀಯರು ಸೇರಿ ಹೊರ ಘಟಕದ ವೇಗದೂತ ಬಸ್‌ಗಳ ನಿಲುಗಡೆಗೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಘಟಕ ವ್ಯವಸ್ಥಾಪಕ ರಾಜಶೇಖರ್ ಅಣ್ಣಿಗೇರಿ ಮಾತನಾಡಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿತ್ಯವೂ ಹೆಚ್ಚು ಬಸ್ ಸಂಚರಿಸಲಿದ್ದು, ಎಲ್ಲ ಬಸ್‌ಗಳ ನಿಲುಗಡೆಗೆ ಚಾಲಕ, ನಿರ್ವಾಹಕರಿಗೆ ಸೂಚಿಸಲಾಗಿದೆ. ನಿರ್ಲಕ್ಷಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷ ಶಾಂತಪ್ಪ, ಉಪಾಧ್ಯಕ್ಷೆ ಹುಸೇನಬೀ, ಸದಸ್ಯರಾದ ರೆಡ್ಡಿ ವೀರರಾಜು, ಪಿ.ರಾಮಕಷ್ಣ, ಮೆಹಬೂಬ್, ಪಿಡಿಒ ನಾಗೇಶ ಕುರ್ಡಿ, ತಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ರಫಿ, ಮುಖಂಡರಾದ ಡಿ.ಆರ್ ಪ್ರಸಾದ್, ಕೆ.ನಾಗೇಶ್ವರರಾವ್, ಹರಿಬಾಬು,ವೈ.ರಾಮು, ಜೆ.ಮಂಜು, ಸಾಯಿಬಾಬಾ, ಮುರಳಿಕಷ್ಣ, ಆಲಪಾಟಿ ಸೂರ್ಯರಾವ್, ಪೊಟ್ಲೂರಿ ವೆಂಕಟರಾವ್, ಟಿ.ಪಿ.ರಾಜು, ಚೆಲ್ಲಾ ಕಾಶಿ, ಬಂಟಿರಾಮು, ಬಡಿಗೇರ ಶಿವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net