ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಿ

08032020 Gangavathi womens day
Published on

ಜಿಪಂ ಸದಸ್ಯೆ ಚನ್ನಮ್ಮ ಪಾಟಿ ವಿಜಯಲಕ್ಷ್ಮಿ ಸಲಹೆ | ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಗಂಗಾವತಿ: ಮಹಿಳೆಯರು ಎಲ್ಲ ಕೇತ್ರದಲ್ಲಿ ಸ್ವಾವಲಂಬಿಗಳಾಗಬೇಕಿದ್ದು, ಪುರುಷರಿಗೆ ಸಮಾನರಾಗಿ ವಿವಿಧ ರಂಗದಲ್ಲಿ ಸಾಧನೆ ಮಾಡಬೇಕು ಎಂದು ಜಿಪಂ ಸದಸ್ಯೆ ಚನ್ನಮ್ಮ ಪಾಟಿ ವಿಜಯಲಕ್ಷ್ಮಿ ಸಲಹೆ ನೀಡಿದರು.

ನಗರದ ಕೃಷಿವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೃಷಿ ಸಂಶೋಧನೆ ಕೇಂದ್ರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಅಭಿವೃದ್ಧಿಗೆ ಹಲವು ಯೋಜನೆಗಳಿದ್ದು, ಸ್ವಾವಲಂಬನೆಯತ್ತ ಗಮನಹರಿಸಬೇಕು. ಅಭಿವೃದ್ಧಿ ಕಾರ್ಯಕ್ರಮಗಳು ದಿನಾಚರಣೆಗೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು ಎಂದರು.

ಸಿಡಿಪಿಒ ಗಂಗಪ್ಪ ಮಾತನಾಡಿ, ಮಹಿಳೆಯರಿಗೆ ಅನುಕಂಪಕ್ಕಿಂತ ಸಮಾನತೆಯ ಅವಕಾಶ ಒದಗಿಸಬೇಕಿದೆ. ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕೃಷಿ ವಿವಿ ವಿಶ್ರಾಂತ ವಿಸ್ತರಣಾ ನಿರ್ದೇಶಕ ಡಾ. ಎಚ್.ಬಸಪ್ಪ, ಕೃಷಿ ವಿವಿ ಪ್ರಾಧ್ಯಾಪಕಿ ಡಾ.ಎನ್.ಎಂ.ಶಕುಂತಲಾ, ಕೆವಿಕೆ ತಜ್ಞರಾದ ಕವಿತಾ ಉಳ್ಳಿಕಾಶಿ, ಡಾ. ಆರ್.ಜ್ಯೋತಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಚನ್ನಪ್ಪ ಮಳಗಿ, ಟಿಎಂಎಇ ಬಿ.ಇಡಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜಿ.ಎಂ.ವಿಜಯಲಕ್ಷ್ಮಿ, ಉದ್ಯಮಿ ಸಿ.ಪ್ರಭಾಕರ, ಹವಾಮಾನ ವೀಕ್ಷಕಿ ಕೆ.ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net