ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ

murder case
ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು. ಸಮಿತಿಯ ಕಕ ವಿಭಾಗೀಯ ಸಂಚಾಲಕ ಜಿ.ಹಂಪೇಶ ಹರಿಗೋಲು,ಪ್ರಮುಖರಾದ ಹನುಮಂತಪ್ಪ ನಾಯಕ ವಡ್ಡರಹಟ್ಟಿ, ಜಂಬಣ್ಣ, ಯಮನೂರಪ್ಪ ನಾಯಕ ಇತರರಿದ್ದರು.
Published on

ಗಂಗಾವತಿ: ಕೊಪ್ಪಳದ ಯುವಕ ಗವಿನಾಯಕ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಸದಸ್ಯರು ಬುಧವಾರ ನಗರದ ತಾಲೂಕಾಡಳಿತ ಸೌಧದ ಕಚೇರಿ ಎದುರು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಜಿ.ಹಂಪೇಶ ಹರಿಗೋಲು ಮಾತನಾಡಿ, ಪ್ರೀತಿ ವಿಚಾರಕ್ಕೆ ಎಸ್ಟಿ ಸಮುದಾಯ ಯುವಕ ಕೊಲೆಯಾಗಿರುವುದು ಖಂಡನೀಯ. ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದು. ಗವಿನಾಯಕ ಕೊಲೆ ವಿಚಾರದಲ್ಲಿ ಪಾರದರ್ಶಕ ತನಿಖೆಯಾಗಬೇಕು. ಆರೋಪಿಗಳು ಮತ್ತು ಬೆಂಬಲಿಗರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಹನುಮಂತಪ್ಪ ನಾಯಕ ವಡ್ಡರಹಟ್ಟಿ, ಜಂಬಣ್ಣ, ಯಮನೂರಪ್ಪ ನಾಯಕ, ಬೆಟ್ಟಪ್ಪ ಹಿರೇಕುರುಬರ, ಈರಪ್ಪ ನಾಯಕ ಗಟಾಲಿ, ಬಲರಾಂ ಬಂಡಿ, ರಾಮಪ್ಪ, ರಾಘು ಭಂಡಾರಿ, ದುರುಗಪ್ಪ, ಬಸವರಾಜ, ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net