

ಗಂಗಾವತಿ: ಬಿಜೆಪಿ ಯುವ ಮೋರ್ಚಾ ನಗರಮಂಡಲ ಅಧ್ಯಕ್ಷ ಜೆ.ವೆಂಕಟೇಶ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಮೂವರನ್ನು ನಗರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬಳ್ಳಾರಿ ರಾಘವೇಂದ್ರ ಕಾಲನಿಯ ಮೊಹ್ಮದ್ ಅಲ್ತ್ಾ ಮಹೆಬೂಬ್‌ಪಾಷಾ, ದಾದಾಪೀರ್ ಅಬ್ದುಲ್ ರ್ೌ ಮತ್ತು ಚೈತ್ರಾ ರವಿ ಅವರನ್ನು ಬಂಧಿಸಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನಗರದ ರಾಜ್ಯ ಹೆದ್ದಾರಿಯಲ್ಲಿ ಅ.8ರಂದು ಜೆ.ವೆಂಕಟೇಶ ಕೊಲೆಯಾಗಿದ್ದು, ಅಂದು ಕಂಪ್ಲಿ ಪೊಲೀಸ್ ಠಾಣೆಗೆ ನಾಲ್ವರು ಶರಣಾಗಿದ್ದರು. ಲಿಂಗರಾಜ್ ಕ್ಯಾಂಪ್ ರವಿ ಮತ್ತು ಇತರರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ದಿನದ ಹಿಂದೆ ಕಾರ್ತೀಕ್ ಎಂಬಾತನನ್ನು ಬಂಧಿಸಿದ್ದ ಪೊಲೀಸರು ಮತ್ತೇ ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಇದುವರಿಗೂ 8 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರವಿ ಬಂಧನಕ್ಕೆ ತಂಡ ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಅತಿ ಸೂಕ್ಷ್ಮ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕೊಪ್ಪಳಕ್ಕೆ ಕರೆದೊಯ್ಯಲಾಯಿತು.