ಗ್ರಾಮದ ಸಮಗ್ರ ಅಭಿವೃದ್ಧಿಗೆ ನೆರವಾಗಲಿ

gangavathi karavasuli
ವಡ್ಡರಹಟ್ಟಿ ಗ್ರಾಪಂಯಿಂದ ಹಮ್ಮಿಕೊಂಡಿದ್ದ ಕರವಸೂಲಾತಿ ಆಂದೋಲನಕ್ಕೆ ತಾಪಂ ಇಒ ಲಕ್ಷ್ಮೀದೇವಿ ಯಾದವ್ ಶನಿವಾರ ಚಾಲನೆ ನೀಡಿದರು. ಪಿಡಿಒ ಸುರೇಶ ಛಲವಾದಿ, ಕಾರ್ಯದರ್ಶಿ ಈಶಪ್ಪ, ನೋಡಲ್ ಅಧಿಕಾರಿ ಚಂದ್ರಶೇಖರ್ ಇತರರಿದ್ದರು.
Published on

ಗಂಗಾವತಿ: ಆಸ್ತಿಗಳ ಸೃಜನೆಗೆ ನರೇಗಾ ಯೋಜನೆ ಪೂರಕವಾಗಿದ್ದು, ಹಳ್ಳಿಗಳ ಅಭಿವೃದ್ಧಿಗೆ ನೆರವಾಗಲಿದೆ ಎಂದು ತಾಪಂ ಇಒ ಲಕ್ಷ್ಮೀ ದೇವಿ ಯಾದವ್ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಆವರಣದಲ್ಲಿ ಉದ್ಯೋಗ ಖಾತರಿ ಯೋಜನೆ 2025-26ನೇ ಸಾಲಿನ ಕ್ರೀಯಾ ಯೋಜನೆ ತಯಾರಿಕೆಯ ಗ್ರಾಮಸಭೆಯಲ್ಲಿ ಮಾತನಾಡಿದರು. ನರೇಗಾದಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶವಿದ್ದು, ಸಮಗ್ರ ಅಭಿವೃದ್ಧಿಗೆ ನೆರವಾಗಬೇಕು. ಜನರ ಆಶೋತ್ತರಗಳಿಗೆ ತಕ್ಕಂತೆ ಚುನಾಯಿತ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು. ಗ್ರಾಮೀಣಾಭಿವದ್ಧಿ ಕನಸು ನನಸಾಗಿಸಲು ನರೇಗಾ ಪರಿಣಾಮಕಾರಿಯಾಗಿದೆ. ಆನ್‌ಲೈನ್‌ನಲ್ಲಿ ಕ್ರಿಯಾಯೋಜನೆ ಅಪ್ಲೋಡ್ ಮಾಡಬೇಕಿದೆ. ಕ್ಯೂಆರ್ ಕೋಡ್‌ನಲ್ಲಿ ಸಲ್ಲಿಸಿದ ಬೇಡಿಕೆ ಪರಿಶೀಲಿಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಡಿಒ ಸುರೇಶ ಛಲವಾದಿ ಮಾತನಾಡಿ, ನಿರ್ದಿಷ್ಟ ಕಾಲಾವಧಿಯಲ್ಲಿ ನಿಯಮಾನುಸಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದ್ದು, ಜಾನುವಾರು, ಮೇಕೆ, ಕೋಳಿ ಶೆಡ್ ಸೇರಿ ವೈಯಕ್ತಿಕ ಕಾಮಗಾರಿಗೆ ಅವಕಾಶವಿದೆ. ವರ್ಷಕ್ಕೆ 100 ದಿನ ದುಡಿಯಲು ಅವಕಾಶವಿದೆ ಎಂದರು. ಉಪಾಧ್ಯಕ್ಷ ಗೌಸ್‌ಸಾಬ್ ತಾಳಕೇರಿ, ಸದಸ್ಯರಾದ ಪೀರ್ ಮಹ್ಮದ್, ಭರತ ಕುಮಾರ, ಶಾಂತಮ್ಮ, ಹೊನ್ನುರಬೀ, ಮೆಹರಾಜ, ಹುಸೇನಪ್ಪ ಬಂಡಿ, ನಿರ್ಮಲಾ, ಸಂಗಪ್ಪ ಇತರರಿದ್ದರು.

ಕಡ್ಡಾಯವಾಗಿ ಕರ ಪಾವತಿಸಿ

ತಾಲೂಕಿನ ವಡ್ಡರಹಟ್ಟಿ ಗ್ರಾಪಂಯಿಂದ ಗ್ರಾಮ ವ್ಯಾಪ್ತಿಯಲ್ಲಿ ಕರವಸೂಲಾತಿ ಅಂದೋಲನಕ್ಕೆ ಚಾಲನೆ ನೀಡಲಾಯಿತು. ಗ್ರಾಪಂ ಪಾವತಿಸಬೇಕಾದ ತೆರಿಗೆ ಕಡ್ಡಾಯ ಪಾವತಿಸಬೇಕಿದ್ದು, ಬಾಕಿ ಉಳಿಸಿಕೊಳ್ಳಲು ಅವಕಾಶವಿಲ್ಲ ಎಂದು ತಾಪಂ ಇಒ ಹೇಳಿದರು. ನಿವೇಶನ, ಮನೆ, ವಾಣಿಜ್ಯ ಮಳಿಗೆ, ಉದ್ಯಮ, ಖಾಸಗಿ ಶಾಲಾ-ಕಾಲೇಜುಗಳು, ರೈಸ್ ಮಿಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಮಾಲೀಕರು ಕಾಲಮಿತಿಯೊಳಗೆ ತೆರಿಗೆ ಪಾವತಿಸಿ, ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ವಡ್ಡರಹಟ್ಟಿ ಮತ್ತು ಆರಾಳ್‌ದಲ್ಲಿ ಆಂದೋಲನ ಹಮ್ಮಿಕೊಳ್ಳಲಾಯಿತು. ಪಿಡಿಒ ಸುರೇಶ ಛಲವಾದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net