

ಗಂಗಾವತಿ: ಅನರ್ಹ ಬಿಪಿಎಲ್ ಕಾರ್ಡ್‌ಗಳ ಪತ್ತೆಗೆ ನ್ಯಾಯಬೆಲೆ ಅಂಗಡಿಕಾರರಿಗೆ ಸೂಚನೆ ನೀಡಲಾಗಿದ್ದು, ಮಾ.31ರೊಳಗೆ ಹಿಂಪಡೆಡೆಯುವಂತೆ ತಾಲೂಕು ಆಡಳಿತ ಸೂಚಿಸಿದೆ.
ನಗರದ ಮಿನಿವಿಧಾನಸೌಧದಲ್ಲಿ ಆಹಾರ ವಿಭಾಗದಿಂದ ಭಾನುವಾರ ಆಯೋಜಿಸಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಈ ರೀತಿ ಖಡಕ್ ಸೂಚನೆ ನೀಡಲಾಗಿದೆ. ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ವ್ಯಾಪ್ತಿಯಲ್ಲಿ 133 ನ್ಯಾಯಬೆಲೆ ಅಂಗಡಿಗಳಿದ್ದು, 6840 ಅಂತ್ಯೋದಯ, 1,00,801ಬಿಪಿಎಲ್ ಮತ್ತು 3364 ಎಪಿಎಲ್ ಸೇರಿ 1,11,005 ಪಡಿತರ ಚೀಟಿಗಳಿವೆ. ಶೇ.30ರಷ್ಟು ಬೋಗಸ್ ಬಿಪಿಎಸ್ ಪಡಿತರದಾರರಿರುವುದು ತಾಲೂಕು ಆಡಳಿತದ ಗಮನಕ್ಕೆ ಬಂದಿದೆ. ಎಲ್ಲ ತಾಲೂಕುಗಳಲ್ಲಿ ಅನರ್ಹ ಬಿಪಿಎಲ್ ಪಡಿತರದಾರರಿದ್ದರೂ ಇದುವರೆಗೂ ಪತ್ತೆ ಹಚ್ಚದ ಕಾರಣ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ ಎಂದು ಸಭೆಯಲ್ಲಿ ತಿಳಿಸಲಾಗಿದೆ.
ಅನರ್ಹ ಬಿಪಿಎಲ್‌ದಾರರು ಕೂಡಲೇ ಇಲಾಖೆಗೆ ಪಡಿತರ ಚೀಟಿ ತಂದೊಪ್ಪಿಸಬೇಕಿದ್ದು, ಮಾ.31 ಗಡುವು ನೀಡಲಾಗುವುದು. ನಿರ್ಲಕ್ಷಿಸಿದರೆ ಪ್ರತಿ ಯುನಿಟ್‌ಗೆ 28 ರೂ.ನಂತೆ 2012ರಿಂದ ಇಲ್ಲಿಯವರೆಗೂ ದಂಡ ವಿಧಿಸಿ, ಪಡಿತರ ಚೀಟಿ ರದ್ದುಪಡಿಸಲಾಗುವುದು. ಸರ್ವೆ ಕಾರ್ಯದಲ್ಲಿ ನ್ಯಾಯಬೆಲೆ ಅಂಗಡಿಕಾರರು ಸಹಕರಿಸಬೇಕು. ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಹಚ್ಚಲು ನೆರವಾಗಬೇಕು ಎಂದು ಮಾಹಿತಿ ನೀಡಲಾಯಿತು.
ಆಹಾರ ಇಲಾಖೆ ಶಿರಸ್ತೇದಾರ್ ಎಚ್.ಐ.ಬಗಲಿ, ಅಧಿಕಾರಿ ನಂದಾ ಪಲ್ಲೇದ್ ಮತ್ತು ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಇದ್ದರು
ಅನರ್ಹ ಬಿಪಿಎಲ್ ಪಡಿತರದಾರರ ಪತ್ತೆ ಹಚ್ಚಲಾಗುತ್ತಿದೆ. ಸರ್ವೇ ಮಾಡಲಾಗುವುದು. ವಾರ್ಷಿಕ 1.20ಲಕ್ಷ ರೂ.ಗೂ ಅಧಿಕ ಆದಾಯ ಹೊಂದಿರುವ ಬಿಪಿಎಲ್ ಪಡಿತರದಾರರನ್ನು ಅನರ್ಹ ಗೊಳಿಸಲಾಗುವುದು. ಮನೆ ಮಾಲೀಕರೊಂದಿಗೆ ಕುಟುಂಬ ಸದಸ್ಯರ ಅದಾಯವನ್ನು ಪರಿಗಣಿಸಲಾಗುವುದು. ಸರ್ವೇ ಸಂದರ್ಭದಲ್ಲಿ ಕುಟುಂಬಗಳು ಸಹಕರಿಸಬೇಕು. ನಿರ್ಲಕ್ಷಿಸಿದರೆ ಕ್ರಮಕ್ಕೆ ಶಿಾರಸು ಮಾಡಲಾಗುವುದು. | ಎಚ್.ಐ.ಬಗಲಿ ಆಹಾರ ಇಲಾಖೆ ಶಿರಸ್ತೇದಾರ್