

ವಧಾಗೃಹ ನಿರ್ಮಿಸುವಂತೆ ಕೆಲವರಿಂದ ಮನವಿ
ಗಂಗಾವತಿ: ಬಹುದಿನದ ಬೇಡಿಕೆಯಾಗಿದ್ದ ಅನಧಿಕೃತ ಕಸಾಯಿ ಖಾನೆಗಳನ್ನು ನಗರಸಭೆ ಅಧಿಕಾರಿಗಳು ಶನಿವಾರ ತೆರವುಗೊಸಿದರು.
ನಗರದಲ್ಲಿ ಗೋಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಸಾಯಿಖಾನೆಗಳನ್ನು ತೆರವುಗೊಳಿಸುವಂತೆ ಇತ್ತೀಚಿಗೆ ಹಿಂದುಪರ ಸಂಘಟನೆಗಳು ನಗರಸಭೆಗೆ ಮುತ್ತಿಗೆ ಹಾಕಿದ್ದವು. ಈ ವಿಚಾರವನ್ನು ಗಂಭೀರ ಪರಿಗಣಿಸಿದ ನಗರಸಭೆ ಅಧಿಕಾರಿಗಳು ಅಮರ ಭಗತ್ ಸಿಂಗ್ ನಗರದಲ್ಲಿರುವ ಕಸಾಯಿಖಾನೆ ತೆರವುಗೊಳಿಸಿತಲ್ಲದೆ ಎತ್ತರವಾಗಿ ಕಟ್ಟಿದ್ದ ಕಾಂಪೌಂಡನ್ನೂ ಒಡೆದು ಹಾಕಲಾಯಿತು. ಎಚ್‌ಆರ್‌ಎಸ್ ಕಾಲನಿ ಮುಖ್ಯರಸ್ತೆಯ ಮನೆಯ ಒಳಭಾಗದಲ್ಲಿದ್ದ ಕಸಾಯಿಖಾನೆಯನ್ನು ತೆರವುಗೊಳಿಸಲಾಯಿತು. ತೆರವು ಸಂದರ್ಭ ಜನ ಜಮಾಯಿಸಿದ್ದರೂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಯಾರೊಬ್ಬರೂ ತಕರಾರು ತೆಗೆಯಲಿಲ್ಲ.