ವಿತರಣೆ ಕಾಲುವೆಗಳ ಆಧುನೀಕರಣಕ್ಕೆ 342 ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ ಎಂದ ಶಾಸಕ ಪರಣ್ಣ ಮುನವಳ್ಳಿ

11062021 Gangavathi Tungabhadra Canal MLA Visit
Published on

ಗಂಗಾವತಿ: ತುಂಗಭದ್ರ ಜಲಾಶಯ ವ್ಯಾಪ್ತಿಯ ವಿತರಣೆ ಕಾಲುವೆಗಳ ಆಧುನೀಕರಣಕ್ಕೆ 342 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲೂಕಿನ ಮಲ್ಲಾಪುರ, ರಾಂಪುರ ಬಳಿ ಆರಂಭವಾಗಿರುವ ವಿಜಯನಗರ ಕಾಲುವೆ ದುರಸ್ತಿ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದರು. ಕಳೆದ ವರ್ಷದಲ್ಲಿ ಅನುದಾನ ಮಂಜೂರಾಗಿದ್ದು, ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. 30 ತಿಂಗಳ ಅವಧಿಯ ಕಾಮಗಾರಿಯ ಶೇ.50 ಪೂರ್ಣಗೊಂಡಿದೆ.ರಾಯ, ಬಸವ ಕಾಲುವೆ ಜತೆಗೆ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ವ್ಯಾಪ್ತಿಯ 16 ವಿತರಣೆ ಕಾಲುವೆಗಳ ಕಾಮಗಾರಿ ಅಧುನೀಕರಣಗೊಳ್ಳಲಿದೆ. ಕಾಲುವೆ ಅಧುನೀಕರಣದಿಂದ 11,151 ಹೆಕ್ಟೇರ್ ಪ್ರದೇಶದ ಭೂಮಿಗೆ ನೀರಿ ಸೌಲಭ್ಯ ದೊರೆಯಲಿದೆ ಎಂದರು.

ಕಾಡಾಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ ಮಾತನಾಡಿ, ಸಣಾಪುರ 0 ದಿಂದ 7 ಕಿ.ಮೀವರೆಗಿನ ಮೇಲ್ಭಾಗದ ಕಾಲುವೆ ಸಾಮರ್ಥ್ಯ ಹೆಚ್ಚಿಸಬೇಕಿದ್ದು, 7 ಬೆಟ್ಟಗಳ ಸಾಲಿನ ಮಳೆ ನೀರು ಕಾಲುವೆಗೆ ಸೇರುತ್ತಿರುವುದರಿಂದ ಕಾಲುವೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಶೀಘ್ರವೇ ನೀರಾವರಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ನೀರು ಬಳಕೆದಾರರ ಸಂಘದ ಅಧ್ಯಕ್ಷ ಸುದರ್ಶನ ವರ್ಮ, ನೀರಾವರಿ ಇಲಾಖೆ ಎಇಇ ಅಮರೇಶ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ರೈತ ಮುಖಂಡರಾದ ಗೌರೀಶ ಬಾಗೋಡಿ, ಚಂದ್ರಶೇಖರ್ ಭತ್ತದ್, ವೀರರಾಘವಲು, ವಿರೂಪಾಕ್ಷಯ್ಯಸ್ವಾಮಿ, ಮಲ್ಲಿಕಾರ್ಜುನ, ಆರ್ ಎನ್‌ಎಸ್ ಸಂಸ್ಥೆ ಇಂಜಿನಿಯರ್ ಕೇಶವಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net