

ಗಂಗಾವತಿ: ನಗರದ ಉಪವಿಭಾಗ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾ ಕೇಂದ್ರ ಮತ್ತು ತಾಲೂಕು ಆರೋಗ್ಯ ಇಲಾಖೆ, ರೋಟರಿ ಕ್ಲಬ್ ರೈಸ್‌ಬೌಲ್ ಘಟಕ ಮತ್ತು ಬೇವಿನಹಳ್ಳಿ ಕೆಎ್ಐಎಲ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್‌ನಿಂದ ಕ್ಷಯ ರೋಗ ಚಿಕಿತ್ಸೆ ಜಾಗೃತಿ ಮತ್ತು ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಸೋಮವಾರ ನಡೆಯಿತು.
ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಮಾತನಾಡಿ, ಸಕಾಲಕ್ಕೆ ಚಿಕಿತ್ಸೆ ಪಡೆದರೆ ಕ್ಷಯರೋಗದಿಂದ ಮುಕ್ತರಾಗಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ವ್ಯವಸ್ಥೆಯಿದೆ. ಖಾಸಗಿ ಸಂಸ್ಥೆಗಳು ಕ್ಷಯ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿರುವುದು ಪ್ರಶಂಸನೀಯ ಎಂದರು.
ಸಂಸ್ಥೆ ಅಧ್ಯಕ್ಷೆ ಗೀತಾ ಚೌಧರಿ, ಕಾರ್ಯದರ್ಶಿ ಭಾರತಿ ಆಗಲೂರ್, ಸಮುದಾಯ ಸಹಭಾಗಿತ್ವದ ಮುಖ್ಯಸ್ಥೆ ಬಸಮ್ಮ ಹಣವಾಳ, ಕ್ಷಯ ರೋಗ ವಿಭಾಗದ ಮೇಲ್ವಿಚಾರಕರಾದ ಮಲ್ಲಿಕಾರ್ಜುನ ಹ್ಯಾಟಿ, ಹುಸೇನ್ ಭಾಷಾ, ರಾಘವೇಂದ್ರ ಜೋಶಿ, ಶ್ರೀನಿವಾಸಲು ಸೇರಿ ಆಶಾ ಕಾರ್ಯಕರ್ತೆಯರಿದ್ದರು.