ಉತ್ತಮ ಸಲಿಗೆ ಕೆವಿಕೆ ಸಲಹೆ ಪಡೆಯಿರಿ

Gangavathi krushi workshop
ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಹೈದರಾಬಾದ್‌ನ ಸಿಮಿಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಕೃಷಿ ಕುರಿತು ತರಬೇತಿ ಕಾರ್ಯಾಗಾರವನ್ನು ಕೆವಿಕೆ ಹಿರಿಯ ತಾಂತ್ರಿಕ ಅಧಿಕಾರಿ ಜಿ.ನಾರಪ್ಪ ಉದ್ಘಾಟಿಸಿದರು. ತಜ್ಞರಾದ ಡಾ.ಕವಿತಾ ಉಳ್ಳಿಕಾಶಿ, ಡಾ.ಜೆ.ರಾಧಾ, ಸಿಮಿಟ್ ಪ್ರತಿನಿಧಿ ಡಾ.ಎನ್.ಸ್ವಾಮಿ ಇತರರಿದ್ದರು.
Published on

ಗಂಗಾವತಿ : ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸುವ ಮೆಕ್ಕೆಜೋಳ ಕೃಷಿಯತ್ತ ರೈತರು ಗಮನಹರಿಸಬೇಕಿದ್ದು, ಸಮತೋಲಿತ ಗೊಬ್ಬರ ಬಳಕೆಗೆ ಆದ್ಯತೆ ನೀಡುವಂತೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಜಿ.ನಾರಪ್ಪ ಸಲಹೆ ನೀಡಿದರು.

ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಹೈದರಾಬಾದ್‌ನ ಸಿಮಿಟ್ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಕೃಷಿ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮಳೆಯಾಶ್ರಯದಲ್ಲಿ ಮೆಕ್ಕೆಜೋಳ ಬೆಳೆಯಲು ಅವಕಾಶವಿದ್ದು, ಕಡಿಮೆ ಖರ್ಚಿನಲ್ಲಿ ಅತಿ ಹೆಚ್ಚು ಆದಾಯಗಳಿಸಿ ಉತ್ಪಾದನೆ ಪ್ರಮಾಣ ಹೆಚ್ಚಿಸಿಕೊಳ್ಳಬಹುದು. ಬಿತ್ತನೆ ಬೀಜಗಳನ್ನು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿ ಸರಿಯಾದ ಸಾಲುಗಳ ಅಂತರವನ್ನು ಕಾಯ್ದುಕೊಳ್ಳಬೇಕಿದ್ದು, ಗಿಡದ ಬೆಳವಣಿಗೆ ತಕ್ಕಂತೆ ಸಮತೋಲಿತ ಗೊಬ್ಬರ ಬಳಸಬೇಕು.

ಬೆಳೆಯ ವಿವಿಧ ಹಂತಗಳಲ್ಲಿ ನೀರು ನಿರ್ವಹಣೆ ಮಾಡಿ ಸಮಗ್ರವಾಗಿ ಕೀಟ ಮತ್ತು ರೋಗಗಳ ನಿರ್ವಹಣೆಯತ್ತ ಗಮನಹರಿಸಬೇಕು. ಕೆವಿಕೆ ಸಲಹೆಯಂತೆ ಕೃಷಿ ಕೈಗೊಂಡರೆ ಉತ್ತಮ ಸಲು ಪಡೆಯಲು ಸಾಧ್ಯ ಎಂದರು.

ಮೆಕ್ಕೆಜೋಳದಲ್ಲಿ ಮೌಲ್ಯವರ್ಧನೆ ಕುರಿತು ಕೆವಿಕೆ ಗೃಹ ವಿಜ್ಞಾನಿ ಡಾ.ಕವಿತಾಉಳ್ಳಿಕಾಶಿ, ಬೀಜೋಪಚಾರ ಕುರಿತು ತಜ್ಞೆ ಜೆ.ರಾಧಾ, ಕೀಟ ಬಾಧೆ ಮತ್ತು ನಿರ್ವಹಣೆ ಕುರಿತು ಕೀಟ ತಜ್ಞೆ ಆರ್.ಎಂ.ರೇವತಿ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net