ಹಿರೇಜಂತಕಲ್ ಶಾಲೆಗೆ ಮುಖ್ಯ-ಸಹ ಶಿಕ್ಷಕರ ನಿಯೋಜಿಸಿ

municipal council member appealed,
ಗಂಗಾವತಿ ಹಿರೇಜಂತಕಲ್ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಕೊರತೆಯಿರುವ ಮುಖ್ಯಶಿಕ್ಷಕ ಮತ್ತು ಶಿಕ್ಷಕ ಹುದ್ದೆ ಭರ್ತಿಗಾಗಿ ಒತ್ತಾಯಿಸಿ ನಗರಸಭೆ ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಬಿಇಒ ಎಚ್.ಟಿ.ನಟೇಶ್‌ಗೆ ಸೋಮವಾರ ಮನವಿ ಸಲ್ಲಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಪರಶುರಾಮ ಇದ್ದರು.
Published on

ಗಂಗಾವತಿ: ನಗರದ ಹಿರೇಜಂತಕಲ್ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಕೊರತೆಯಿರುವ ಮುಖ್ಯಶಿಕ್ಷಕ ಮತ್ತು ಶಿಕ್ಷಕ ಹುದ್ದೆ ಭರ್ತಿಗಾಗಿ ಒತ್ತಾಯಿಸಿ ನಗರಸಭೆ ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಬಿಇಒ ಎಚ್.ಟಿ.ನಟೇಶ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ಬಿಇಒ ಕಚೇರಿಯಲ್ಲಿ ಶೈಕ್ಷಣಿಕ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಬೇಡಿಕೆ ಮನವಿ ಸಲ್ಲಿಸಿದರು. ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಮಾತನಾಡಿ, ಶಾಲೆಯಲ್ಲಿ ಎಲ್‌ಕೆಜಿಯಿಂದ 8ನೇ ತರಗತಿವರೆಗೆ 470 ವಿದ್ಯಾರ್ಥಿಗಳಿದ್ದು, 7 ಶಿಕ್ಷಕರಿದ್ದಾರೆ.

ಮುಖ್ಯಶಿಕ್ಷಕ ವಿಷಯ ಶಿಕ್ಷಕರ ಕೊರತೆಯಿದ್ದು, ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಹೆಚ್ಚುವರಿ 7 ಶಿಕ್ಷಕರ ಅಗತ್ಯವಿದ್ದು, ಕೂಡಲೇ ನಿಯೋಜಿಸುವಂತೆ ಒತ್ತಾಯಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ಪರಶುರಾಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net