

ಗಂಗಾವತಿ: ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದ ದೇವರಾಜ ಅರಸು ದೂರದೃಷ್ಟಿ ಆಡಳಿತದಿಂದ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರು ಎಂದು ಪ್ರಭಾರ ತಹಸೀಲ್ದಾರ್ ಎಸ್.ರವಿ ಅಂಗಡಿ ಹೇಳಿದರು.
ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ತಾಲೂಕಾಡಳಿತ ಮತ್ತು ಹಿಂದುಳಿದ ವರ್ಗಗಳ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಸಿಎಂ ದೇವರಾಜ ಅರಸು ಜಯಂತಿ ನಿಮಿತ್ತ ಸದ್ಭಾವನೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದುಳಿದ ವರ್ಗಗಗಳ ಇಲಾಖೆ ವಿಸ್ತೀರ್ಣಾಧಿಕಾರಿ ಉಷಾ ಮುಜುಂದಾರ್, ಕಂದಾಯ ಇಲಾಖೆ ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಸುನೀಲ್ ಕುಲ್ಕರ್ಣಿ, ಎಂ.ಡಿ.ರಫೀ, ಪ್ರಕಾಶ ನಾಯ್ಕ, ಶ್ರೀರಾಂ ಜೋಶಿ, ಶಿವಶಂಕರ, ಕವಿತಾ, ನಾಗರತ್ನಮ್ಮ ಇತರರಿದ್ದರು.
ಮರಳಿ ಗ್ರಾಪಂ ಕಚೇರಿ: ತಾಲೂಕಿನ ಮರಳಿ ಗ್ರಾಪಂ ಕಚೇರಿಯಲ್ಲಿ ದಿ.ದೇವರಾಜ ಅರಸು ಜಯಂತ್ಯುತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಸದ್ಭಾವನೆ ಪ್ರತಿಜ್ಞಾವಿಧಿ ಕೈಗೊಂಡರು. ಕಾರ್ಯದರ್ಶಿ ರಮೇಶ, ಕರವಸೂಲಿಗಾರ್ತಿಗಿರಿಜಮ್ಮ, ಗ್ರಂಥಪಾಲಕ ಪಂಪಾಪತಿ ಹೂಗಾರ್, ಕಾಯಕ ಮಿತ್ರೆ ನಾಗಮ್ಮ, ಪ್ರಮುಖರಾದ ಚಿದಾನಂದ, ರಮೇಶ ನಾಯಕ ಇತರರಿದ್ದರು.