ದೇಗುಲ-ಸ್ಮಾರಕಗಳ ರಕ್ಷಣೆ ಆದ್ಯತೆಯಾಗಲಿ, ಸರ್ಕಾರಕ್ಕೆ ಕಿಷ್ಕಿಂಧಾ ಬಚಾವೋ ಹೋರಾಟ ಸಮಿತಿ ಒತ್ತಾಯ

special meeting
ಕಿಷ್ಕಿಂಧಾ ಪ್ರಾಂತ್ಯದ ದೇವಾಲಯ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಕಿಷ್ಕಿಂಧಾ ಬಚಾವೋ ಹೋರಾಟ ಸಮಿತಿ ಸದಸ್ಯರು ಗಂಗಾವತಿ ತಾಲೂಕಿನ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟದ ಬಳಿ ಗುರುವಾರ ವಿಶೇಷ ಸಭೆ ನಡೆಸಿದರು. ಸಮಿತಿ ಪ್ರಮುಖ ಶರಣಪ್ಪ ದೊಡ್ಮನಿ, ಪದಾಧಿಕಾರಿಗಳಾದ ಶರಣೇಗೌಡ ಕೇಸರಹಟ್ಟಿ, ವೆಂಕಟರೆಡ್ಡಿ, ಪಿ.ಲಕ್ಷ್ಮಣನಾಯ್ಕ ಇತರರಿದ್ದರು.
Published on

ಗಂಗಾವತಿ: ಕಿಷ್ಕಿಂಧಾ ಪ್ರಾಂತ್ಯದ ದೇವಾಲಯ ಮತ್ತು ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಒತ್ತಾಯಿಸಿ ಕಿಷ್ಕಿಂಧಾ ಬಚಾವೋ ಹೋರಾಟ ಸಮಿತಿ ಸದಸ್ಯರು ತಾಲೂಕಿನ ಹನುಮನಹಳ್ಳಿಯ ಅಂಜನಾದ್ರಿ ಬೆಟ್ಟದ ಬಳಿ ಗುರುವಾರ ವಿಶೇಷ ಸಭೆ ನಡೆಸಿದರು.

ತಾಲೂಕು ವ್ಯಾಪ್ತಿಯ ಎಲ್ಲ ಧಾರ್ಮಿಕ ಕ್ಷೇತ್ರಗಳನ್ನು ಮುಜರಾಯಿ ಇಲಾಖೆ ಅಭಿವೃದ್ಧಿಪಡಿಸಬೇಕು ಇಲ್ಲವೇ ಧಾರ್ಮಿಕ ಸಂಘಟನೆಗಳಿಗೆ ವಹಿಸುವಂತೆ ಸದಸ್ಯರು ಒತ್ತಾಯಿಸಿದರು.

ಸಮಿತಿ ಪ್ರಮುಖ ಶರಣಪ್ಪ ದೊಡ್ಮನಿ ಮಾತನಾಡಿ, ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ದೇವಾಲದಯಲ್ಲಿ ಭಕ್ತರ ಕಾಣಿಕೆ ಹೆಚ್ಚುತ್ತಿದ್ದರೂ, ಮೂಲ ಸೌಕರ್ಯ ಕಲ್ಪಿಸುವಲ್ಲಿ ಮುಜರಾಯಿ ಇಲಾಖೆ ವಿಲವಾಗಿದೆ. ಅದರಂತೆ ಪಂಪಾಸರೋವರದ ವಿಜಯಲಕ್ಷ್ಮೀ, ವಾಣಿಭದ್ರೇಶ್ವರ, ಕಣವಿ ಆಂಜನೇಯ ಸೇರಿ ಪ್ರಮುಖ ಐತಿಹಾಸಿಕ ದೇವಾಲಯ ಮತ್ತು ಸ್ಮಾರಕಗಳ ಬಳಿ ಪ್ರವಾಸಿಗರು ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ. ಸರ್ಕಾರಕ್ಕೆ ನಿರ್ವಹಿಸಲಾಗದಿದ್ದರೆ ಧಾರ್ಮಿಕ ಸಂಸ್ಥೆಗಳಿಗೆ ವಹಿಸುವಂತೆ ಒತ್ತಾಯಿಸಿದರು.

ಸಮಿತಿ ಪದಾಧಿಕಾರಿಗಳಾದ ಶರಣೇಗೌಡ ಕೇಸರಹಟ್ಟಿ, ವೆಂಕಟರೆಡ್ಡಿ, ಪಿ.ಲಕ್ಷ್ಮಣನಾಯ್ಕ, ನಾರಾಯಣಗೌಡ, ಹಂಪೇಶ ಹರಿಗೋಲು, ಕೆ.ಕಾವ್ಯ, ವೀರೇಶ, ಬಾಲು ಸೇರಿ ಆನೆಗೊಂದಿ, ಮಲ್ಲಾಪುರ, ಸಣಾಪುರ, ಸಂಗಾಪುರ ಮತ್ತು ಚಿಕ್ಕರಾಂಪುರ, ಕಡೇಬಾಗಿಲು ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net