ಸಮೀಕ್ಷೆ ಮತದಾರರ ಪಟ್ಟಿಯೊಂದಿಗೆ ಹೋಲಿಕೆಯಾಗಲಿ

23052020 Gangavathi Officers Meeting
Published on

ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಹೇಳಿಕೆ | ಕನಕಗಿರಿ, ಗಂಗಾವತಿ ಕ್ಷೇತ್ರ ವ್ಯಾಪ್ತಿಯ ಸರ್ವೇ ಅಧಿಕಾರಿಗಳ ಪೂರ್ವಭಾವಿ ಸಭೆ

ಗಂಗಾವತಿ: ಕರೊನಾ ಮುಂಜಾಗ್ರತೆ ಕ್ರಮಗಳ ಭಾಗವಾಗಿ ಕ್ಷೇತ್ರವಾರು ಸಮೀಕ್ಷೆ ಸಮರ್ಪಕವಾಗಬೇಕಿದ್ದು, ಮತದಾರರ ಪಟ್ಟಿಯೊಂದಿಗೆ ಹೋಲಿಕೆಯಾಗಬೇಕಿದೆ ಎಂದು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮೀಕ್ಷೆ ಅಧಿಕಾರಿಗಳ 3ನೇ ಹಂತದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಟುಂಬ ಸಮೀಕ್ಷೆ ಶೇ.95 ಪೂರ್ಣಗೊಂಡಿದ್ದು, ಶೇ.5 ಬಾಕಿ ಉಳಿದುಕೊಂಡಿರುವ ಹಿನ್ನೆಲೆಯಲ್ಲಿ ಹೋಲಿಕೆಯಾಗುತ್ತಿಲ್ಲ. ಕುಟುಂಬ ಸದಸ್ಯರ ಸಂಖ್ಯೆ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬೇಕಿದ್ದು, ರೋಗದ ಸ್ಥಿತಿಗತಿ ಕುರಿತು ದಾಖಲೀಕರಿಸಬೇಕಿದೆ. ಇದರಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದ್ದು, ಆರೋಗ್ಯ ಸಿಬ್ಬಂದಿಯೊಂದಿಗೆ ಚಿಕಿತ್ಸೆ ಕೊಡಿಸಬಹುದಾಗಿದೆ. ಬಾಕಿ ಉಳಿದ ಸಮೀಕ್ಷೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ಕನಕಗಿರಿ ತಹಸೀಲ್ದಾರ್ ರವಿ ಅಂಗಡಿ, ಸಿಡಿಪಿಒ ಗಂಗಪ್ಪ, ಬಿಇಒ ಸೋಮಶೇಖರಗೌಡ, ಸಮನ್ವಯ ಶಿಕ್ಷಣಾಧಿಕಾರಿ ವಿ.ಬಿ.ಗೊಂಡಬಾಳ್, ಉಪತಹಸೀಲ್ದಾರ್ ಶಿವಕುಮಾರ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಮಹ್ಮದ್ ರಫೀ ಸೇರಿ ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಮೀಕ್ಷೆ ಅಧಿಕಾರಿಗಳಿದ್ದರು.

ಗೇಮ್ ಇದ್ದರೆ ಆ್ಯಪ್ ಕೆಲಸ ಮಾಡಲ್ಲ…: ಸಮೀಕ್ಷೆಗೆ ನಿಯೋಜನೆಗೊಂಡ ಬಹುತೇಕ ಕಾರ್ಯಕರ್ತರದಲ್ಲಿ ಆಂಡ್ರಾಯ್ಡಾ ಮೊಬೈಲ್‌ಲಿಲ್ಲ. ಇದ್ದವರಲ್ಲಿ ಅಪಲೋಡ್ ಮಾಡುವ ರೀತಿ ಗೊತ್ತಿಲ್ಲ. ಹೀಗಾಗಿ ಕೆಲವೊಮ್ಮೆ ತಾಳೆಯಾಗುತ್ತಿಲ್ಲ. ಕುಟುಂಬ ವಿಂಗಡಣೆಯಾಗಿದ್ದ ಸಂದರ್ಭದಲ್ಲಿ ಅಪಲೋಡ್‌ನಲ್ಲಿ ಪ್ರತ್ಯೇಕ ಮಾಹಿತಿ ತೆಗೆದುಕೊಳ್ಳುತ್ತಿಲ್ಲ. ಮೊಬೈಲ್‌ನಲ್ಲಿ ಗೇಮ್ ಆ್ಯಪ್‌ಗಳಿದ್ದರೆ ಸಮೀಕ್ಷೆ ಮಾಹಿತಿ ಆ್ಯಪ್ ಸಮಪರ್ಕ ಕೆಲಸ ಮಾಡಲ್ಲ ಮತ್ತು ಸರ್ವರ್ ಸಪೋರ್ಟ್ ಮಾಡಲ್ಲ. ಹೀಗಾಗಿ ಮೊದಲು ಗೇಮ್ ಆ್ಯಪ್ ತೆಗೆಯುವಂತೆ ತರಬೇತಿ ಅಧಿಕಾರಿ ಶರಣಪ್ಪ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net