

ಗಂಗಾವತಿ: ಗ್ರಾಮೀಣ ಭಾಗದ ಎಲ್ಲ ಆರ್‌ಒ ಪ್ಲಾಂಟ್‌ಗಳನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕಿದ್ದು, ಶುದ್ಧೀಕರಿಸಿದ ನೀರನ್ನೇ ಗ್ರಾಮಸ್ಥರಿಗೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಪಂ ಇಒ ರಾಮರಡ್ಡಿ ಪಾಟೀಲ್ ಹೇಳಿದರು.
ನಗರದ ತಾಪಂ ಮಂಥನ ಸಭಾಂಗಣದಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ವಿಪತ್ತು ನಿರ್ವಹಣೆ ಸಮಿತಿ ಸಭೆಯಲ್ಲಿ ಮಾತನಾಡಿದರು. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಬೇಕಿದ್ದು, ಖಾಸಗಿ ಬೋರ್ ಮಾಲೀಕರಿಂದ ನೀರು ಪಡೆಯಲು ಕ್ರಮ ಕೈಗೊಳ್ಳಬೇಕು. ಪಿಡಿಒ, ವಿಎ ಮತ್ತು ಗ್ರಾಮೀಣ ನೀರು ನೈರ್ಮಲ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆಯೊಂದಿಗೆ ನೀರಿನ ಸಮಸ್ಯೆ ಎದುರಾಗದಂತೆ ನಿಗಾವಹಿಸಬೇಕು. ನಿತ್ಯವೂ ನೀರಿನ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಇಲಾಖೆ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸುವ ಮೂಲಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.
ತಹಸೀಲ್ದಾರ್ ಯು.ನಾಗರಾಜ್ ಮಾತನಾಡಿ, ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿದ್ದರೆ, ರೀಬೋರ್ ಮಾಡಿಸಬೇಕು. ನೀರಿನ ಕೊರತೆಯಾದರೆ ಟ್ಯಾಂಕ್‌ಗಳ ಮೂಲಕವಾದರೂ ಪೂರೈಸಿ. ನೀರಿನ ಅಭಾವ ಎದುರಾಗದಂತೆ ಎಚ್ಚರಿಕೆವಹಿಸಬೇಕಿದ್ದು, ಕಂದಾಯ, ಗ್ರಾಪಂ, ಜಿಪಂ ಸಿಬ್ಬಂದಿ ನಿರಂತರ ಸಂಪರ್ಕದಲ್ಲಿರಬೇಕು. ತಾಲೂಕಿನಲ್ಲಿ ಮೇವು ಕೊರತೆಯಿಲ್ಲ, ಜಾನುವಾರುಗಳ ಸಂಖ್ಯೆ ತಕ್ಕಂತೆ ಮೇವು ಸಂಗ್ರಹವಾಗಿದೆ. ಮುಂದಿನ ವಾರದಲ್ಲಿ ನೀರಿನ ಕೊರತೆಯಾಗುವ ಗ್ರಾಮಗಳ ಪಟ್ಟಿಯನ್ನು ತಾಲೂಕಾಡಳಿತಕ್ಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ದೇವಪ್ಪ ಕಟ್ಟಿಮನಿ, ಉಪತಹಸೀಲ್ದಾರ್ ಮಹೆಬೂಬ್‌ಅಲಿ, ಕಂದಾಯ ನಿರೀಕ್ಷಕ ಮಹೇಶ ದಲಾಲ್, ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ, ಪಿಡಿಒ, ಗ್ರಾಮಾಡಳಿತಾಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆ ಪ್ರತಿನಿಧಿಗಳಿದ್ದರು.