ಕಾಯಿಲೆ ಕುರಿತು ಅರಿವು ಮೂಡಿಸಲಿ

Gangavathi world cancer day
ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವಕ್ಯಾನ್ಸರ್ ವಿರೋಧಿ ದಿನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ.ಪ್ರಕಾಶ ಶುಕ್ರವಾರ ಉದ್ಘಾಟಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ, ವೈದ್ಯರಾದ ಡಾ.ಅಬಿದಿನ್‌ಹುಸೇನ್, ಡಾ.ಶ್ರೀಧರ್, ಡಾ.ವಿನೋದಕುಮಾರ ಇತರರಿದ್ದರು.
Published on

ಗಂಗಾವತಿ: ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದ ಕ್ಯಾನ್ಸರ್ ನಿಯಂತ್ರಿಸಬಹುದಾಗಿದ್ದು, ರೋಗದ ಬಗ್ಗೆ ಭಯ ಬೇಡ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ.ಪ್ರಕಾಶ ಹೇಳಿದರು.

ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಕ್ಯಾನ್ಸರ್ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳನ್ನು ರೂಢಿಸಿಕೊಂಡರೆ ಸಂಭವನೀಯ ರೋಗ ಎದುರಿಸಬೇಕಾಗುತ್ತಿದ್ದು, ಜಾಗೂರುಕತೆಯಿಂದ ಜೀವನ ನಡೆಸಬೇಕಿದೆ. ಕ್ಯಾನ್ಸರ್ ಕುರಿತು ಆರೋಗ್ಯ ಕಾರ್ಯಕರ್ತರು ಜನರಲ್ಲಿ ಅರಿವು ಮೂಡಿಸಬೇಕು. ಆರೋಗ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಬೇಕಿದೆ ಎಂದರು.

ವಿಶ್ವಕ್ಯಾನ್ಸರ್ ವಿರೋಧಿ ದಿನ ಕುರಿತು ಆಸ್ಪತ್ರೆಯಲ್ಲಿ ಹಮ್ಮಿಕೊಂಡ ಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ಯೋಜನೆಗಳ ಕುರಿತು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಮಾತನಾಡಿದರು.ವೈದ್ಯರಾದ ಡಾ.ಅಬಿದಿನ್‌ಹುಸೇನ್, ಡಾ.ಶ್ರೀಧರ್, ಡಾ.ವಿನೋದಕುಮಾರ, ಡಾ.ರಮೇಶ ಸೇರಿ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net