ವಾರ್ಷಿಕೋತ್ಸವ ನಿಮಿತ್ತ ಮಹಾಚಂಡಿ ಹೋಮ

Temple Anniversary
ಗಂಗಾವತಿ ತಾಲೂಕಿನ ಶ್ರೀರಾಮನಗರದ ಗ್ರಾಮದೇವತೆ ಶ್ರೀಕನಕದುರ್ಗಾದೇವಿ ದೇವಾಲಯದ 17ನೇ ವಾರ್ಷಿಕೋತ್ಸವ ನಿಮಿತ್ತ ಮಹಾಚಂಡಿ ಹೋಮ ಪೂರ್ಣಾಹುತಿ ಶುಕ್ರವಾರ ನೆರವೇರಿಸಲಾಯಿತು.ದೇವಾಲಯ ಸಮಿತಿ ಪದಾಧಿಕಾರಿಗಳಾದ ಕೆ.ವೆಂಕಟರಾವ್, ಟಿ.ಸುಭಾಸಚಂದ್ರ ಭೋಸ್, ಟಿ.ವೆಂಕಟರಾಜು, ಡಿ.ಆರ್.ಪ್ರಸಾದ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಗ್ರಾಮದೇವತೆ ಶ್ರೀಕನಕದುರ್ಗಾದೇವಿ ದೇವಾಲಯದ 17ನೇ ವಾರ್ಷಿಕೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆಯಿಂದಲೇ ವಿಶೇಷ ಪೂಜೆ ಜರುಗಿದ್ದು, ಮೂರ್ತಿಗೆ ತೈಲಾಭಿಷೇಕ, ಜಲಾಭಿಷೇಕ, ಕ್ಷೀರಾಭಿಷೇಕ, ಲ ಪಂಚಾಮೃತಾಭಿಷೇಕ, ರಜತ ಕವಚ ಮತ್ತು ಹೂವುಗಳಿಂದ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮಹಾಚಂಡಿ ಹೋಮ ಮತ್ತು ಪೂರ್ಣಾಹುತಿ ನೆರವೇರಿಸಲಾಯಿತು. ಪಾರಾಯಣ, ಭಜನೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ದೇವಾಲಯ ಸಮಿತಿ ಪದಾಧಿಕಾರಿಗಳಾದ ಕೆ.ವೆಂಕಟರಾವ್, ಟಿ.ಸುಭಾಸಚಂದ್ರ ಭೋಸ್, ಟಿ.ವೆಂಕಟರಾಜು, ಡಿ.ಆರ್.ಪ್ರಸಾದ, ಕೆ.ಶ್ರೀನಿವಾಸ, ಆಲಪಾಟಿ ಸೂರ್ಯರಾವ್, ರಾಘವಲು, ಆಲಪಾಟಿ ರಾಮು, ಕರಟೂರಿ ನಾಗೇಶ್ವರರಾವ್, ಗೋಪಿ, ಸತೀಶ, ನಿಖಿಲ್‌ಕುಮಾರ, ಪವನ್, ವೈ.ರಾಮುಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net