ವೀರ ಬ್ರಹ್ಮೇಂದ್ರ ಶ್ರೀಗಳ ಆರಾಧನೆ ಸಂಪನ್ನ

Aradhana Mahotsav
ಗಂಗಾವತಿ ತಾಲೂಕಿನ ಶ್ರೀರಾಮನಗರದ ಗುಂಡೂರು ರಸ್ತೆಯ ಶ್ರೀ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ 332ನೇ ಆರಾಧನೆ ಮಹೋತ್ಸವ ಗುರುವಾರ ಜರುಗಿತು. ಗ್ರಾಪಂ ಮಾಜಿ ಸದಸ್ಯ ಎಂ.ಜೆ.ರವಿಕುಮಾರ, ಮುಖಂಡರಾದ ಎ.ರಾಮಕೃಷ್ಣ, ಸತ್ಯನಾರಾಯಣ, ಮಂಜುನಾಥ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಶ್ರೀರಾಮನಗರದ ಗುಂಡೂರು ರಸ್ತೆಯ ಶ್ರೀ ಪೋತಲೂರಿ ವೀರಬ್ರಹ್ಮೇಂದ್ರ ಸ್ವಾಮಿ ದೇವಾಲಯದಲ್ಲಿ ಕಾಲಜ್ಞಾನಿ ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿಗಳ 332ನೇ ಆರಾಧನಾ ಮಹೋತ್ಸವ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಆರಾಧನೆ ಮಹೋತ್ಸವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮಹಾಸಂಕಲ್ಪ, ಮಹಾಗಣಪತಿ ಪೂಜೆ, ವೀರ ಗೋವಿಂದಾ ಸಮೇತ ವೀರಬ್ರಹ್ಮೇಂದ್ರ ಸ್ವಾಮಿ ಪರಿವಾರದ ಮೂರ್ತಿಗಳಿಗೆ ಅಭಿಷೇಕ, ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಹೂವಿನ ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.

ಶಂಕರ ಮಠದ ಪ್ರತಿನಿಧಿ ಸುದರ್ಶನ ವೈದ್ಯ ಮಾತನಾಡಿ, ಬ್ರಹ್ಮೇಂದ್ರಸ್ವಾಮಿಗಳು ಕಾಲಜ್ಞಾನದಲ್ಲಿ ತಿಳಿಸಿದಂತೆ ಎಲ್ಲ ಘಟನೆಗಳು ಜರುಗುತ್ತಿದ್ದು, ಸದ್ಯದ ಯುದ್ಧದ ಪರಿಸ್ಥಿತಿಯನ್ನು 300 ವರ್ಷಗಳ ಹಿಂದೆ ಹೇಳಿದ್ದರು. ತತ್ವ ಸಿದ್ಧಾಂತಗಳು ಕಲಿಯುಗದಲ್ಲಿ ಸತ್ಯವಾಗಿಸಿದೆ ಎಂದರು.

ಗ್ರಾಪಂ ಮಾಜಿ ಸದಸ್ಯ ಎಂ.ಜೆ.ರವಿಕುಮಾರ, ಮುಖಂಡರಾದ ಎ.ರಾಮಕೃಷ್ಣ, ಸತ್ಯನಾರಾಯಣ, ಮಂಜುನಾಥ, ಪರಬ್ರಹ್ಮ, ಸೂರಿಬಾಬು, ಎ.ರಮೇಶ, ಎಂ.ಜೆ.ವೆಂಕಟೇಶ, ಗಾರಪಾಟಿ ರಾಮಕೃಷ್ಣ, ಮಹೆಬೂಬ್, ಶೇಖರ್, ರಾಂಬಾಬು, ಪ್ರಸಾದ, ಅರ್ಚಕರಾದ ನರಸಿಂಹಾಚಾರ್, ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net