

ಗಂಗಾವತಿ; ಸಂಘಟನೆಗಳು ಕ್ರೀಡೆಗಳ ಜತೆಗೆ ಸಮಾಜಮುಖಿ ಚಟುವಟಿಕೆಗಳತ್ತ ಗಮನಹರಿಸಿ, ಗ್ರಾಮಾಭಿವೃದ್ಧಿಗೆ ನೆರವಾಗಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಯುವ ಸೇವಾ ಸಂಘದ 11ನೇ ವಾರ್ಷಿಕೋತ್ಸವ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಪುರುಷರ ಮತ್ತು ಮಹಿಳೆಯರ ರಾಜ್ಯಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಣ, ಆರೋಗ್ಯ, ಮನರಂಜನೆ ಸೇರಿ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವ ಸೇವಾ ಸಂಘ, ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಿದೆ. ಗ್ರಾಮೀಣ ಭಾಗದ ಹೆಸರನ್ನು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯಲು ಸಂಘಟನೆಗಳು ಗಮನಹರಿಸಬೇಕಿದ್ದು, ಕ್ರೀಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ ಮಾತನಾಡಿ, ಆಟಗಾರರು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಬೇಕು. ಕ್ರೀಡಾಸಕ್ತಿ ಬೆಳೆಸಿಕೊಂಡರೆ ಯುವಕರು ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದರು. ಹಿರಿಯ ಮುಖಂಡ ಸತ್ಯನಾರಾಯಣ ದೇಶಪಾಂಡೆ ಮಾತನಾಡಿದರು.
ಎರಡು ದಿನಗಳ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಸಂಘಟನೆ ಚಟುವಟಿಕೆಗಳ ಕುರಿತು ಯುವ ಸೇವಾ ಸಂಘದ ಅಧ್ಯಕ್ಷ ಕೆ.ಪವನ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಹುಸೇನಬೀ, ಸದಸ್ಯರಾದ ಮೆಹಬೂಬ್, ಪಿಲ್ಲಿ ರಾಮಕಷ್ಣ, ಪೊಟ್ಲೂರು ರಾಮಕಷ್ಣ, ಮಾಜಿ ಅಧ್ಯಕ್ಷ ಕರಟೂರಿ ಶ್ರೀನಿವಾಸ, ಲಯನ್ಸ್ ಕ್ಲಬ್ ತಾಲೂಕು ಅಧ್ಯಕ್ಷ ಕೆ.ಸುಬ್ರಹ್ಮಣ್ಯೇಶ್ವರಾವ್, ಮುಖಂಡರಾದ ಜಿ.ರಾಮಕಷ್ಣ, ಚನ್ನುಪಾಟಿ ಪ್ರಭಾಕರ್, ಮನ್ನೆ ಕಷ್ಣಮೂರ್ತಿ, ಡಾ.ಕುಬೇರ, ಮನ್ನೆ ರಾಮು, ಕಿರಣ್ ತಂಗಡಗಿ, ರವಿ ತಂಗಡಗಿ, ಶಿವರಾಜ, ರೆಡ್ಡಿ ನಾಗೇಶರಾವ್, ಡಾ.ಜಾಕೀರ್ ಹುಸೇನ್, ರವ್ೂ ಇತರರಿದ್ದರು.