

ಗಂಗಾವತಿ: ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾದಂತೆ ಸ್ವಸ್ಥ ಸಮಾಜ ನಿರ್ಮಿಸಬಹುದಾಗಿದ್ದು, ದಾಸಪರಂಪರೆಯ ಚಿತ್ರಗಳನ್ನು ಪ್ರತಿಯೊಬ್ಬರು ನೋಡಬೇಕಿದೆ ಎಂದು ರಾಜವಂಶಸ್ಥೆ ಲಲಿತಾರಾಣಿರಾಯಲು ಹೇಳಿದರು.
ನಗರದ ನಗರೇಶ್ವರ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜ ಮತ್ತು ಮಾತಾಂಬುಜಾ ಮೂವಿಸ್ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡ ಶ್ರೀ ಜಗನ್ನಾಥ ದಾಸರು ಭಾಗ 2 ಚಿತ್ರದ ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಚಿತ್ರಗಳನ್ನು ಥಿಯೇಟರ್‌ನಲ್ಲಿ ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ,ಕಲೆ, ಸಂಸ್ಕೃತಿ ಮತ್ತು ಕಲಾವಿದರಿಗೆ ಗೌರವ ನೀಡುವಂತೆ ಸಲಹೆ ನೀಡಿದರು.
ಚಿತ್ರದ ಕುರಿತು ಕಲಾವಿದ ಶರದ್ ದಂಡಿನ್ ಮಾತನಾಡಿದರು. ಮಾಜಿ ಸಂಸದ ಎಸ್.ಶಿವರಾಮನಗೌಡ, ಮಿಮಿಕ್ರಿ ಕಲಾವಿದ ನರಸಿಂಹ ಜೋಶಿ, ನಿರ್ದೇಶಕ ಡಾ.ಮಧುಸೂಧನ ಹವಾಲ್ದಾರ್, ನಟ ಮತ್ತು ನಿರ್ಮಾಪಕ ವಿಷ್ಣುತೀರ್ಥ ಜೋಶಿ, ಆರ್ಯವೈಶ್ಯ ಸಮಾಜದ ತಾಲೂಕಾಧ್ಯಕ್ಷೆ ರೂಪಾರಾಣಿ ರಾಯಚೂರು, ಮುಖಂಡ ಬಾಗೋಡಿ ಯಲ್ಲಯ್ಯ ಇತರರಿದ್ದರು.