ಗಂಗಾವತಿ ತಾಲೂಕಿನ ಮಲ್ಲಾಪುರದಲ್ಲಿ ಹಮ್ಮಿಕೊಂಡಿದ್ದ ಗಂಗಾಪರಮೇಶ್ವರಿ ದೇವಾಲಯದ ವಾರ್ಷಿಕೋತ್ಸವದಲ್ಲಿ ಮಾಜಿ ಶಾಸಕ ಪರಣ್ಣಮುನವಳ್ಳಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರಾದ ಬಿ.ರಾಮಣ್ಣ, ಆರ್.ಕೆ. ಎರ‌್ರಿಸ್ವಾಮಿ, ಅಯ್ಯಪ್ಪ ಮುಕ್ಕುಂದಿ, ಜಿ.ಪಂಪಾಪತಿ, ನಾಗರಾಜ ರಾಮಸಾಗರ ಇತರರಿದ್ದರು.
ಗಂಗಾವತಿ: ತಾಲೂಕಿನ ಮಲ್ಲಾಪುರ ಶ್ರೀ ಗಂಗಾಪರಮೇಶ್ವರಿ ದೇವಾಲಯದಲ್ಲಿ ಗಂಗಾಮತ ಸಮಾಜದಿಂದ ಭಾನುವಾರ ಶ್ರೀ ಗಂಗಾಪರಮೇಶ್ವರಿ ದೇವಿಯ 17ನೇ ವಾರ್ಷಿಕೋತ್ಸವ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಮಾಜಿ ಶಾಸಕ ಪರಣ್ಣಮುನವಳ್ಳಿ ಮಾತನಾಡಿ, ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಸಮಾಜ ಅಭಿವೃದ್ಧಿ ಹೊಂದಬೇಕಿದ್ದು, ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದೆ. ಸಮಾಜಕ್ಕೆ ದೊರೆಯಬೇಕಾದ ಮೀಸಲಾತಿ ಹಾಗೂ ನಿಗಮ ಮಂಡಳಿಗೆ ಅನುದಾನವಿಲ್ಲದೇ, ಸಂಕಷ್ಟ ಎದುರಿಸುತ್ತಿದೆ. ಒಗ್ಗಟ್ಟಿನಿಂದ ಬೇಡಿಕೆಗಳನ್ನು ಪಡೆದುಕೊಳ್ಳಬೇಕಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಂತೆ ಸಲಹೆ ನೀಡಿದರು.
ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ನಗರಸಭೆ ಸದಸ್ಯ ಪರಶುರಾಂ ಮಡ್ಡೇರ್, ಸಮಾಜದ ಮುಖಂಡರಾದ ರಾಜಶೇಖರಪ್ಪ ಮುಸ್ಟೂರು, ಶಿವಕುಮಾರ ಅರಿಕೇರಿ, ಹನುಮೇಶ ಭಟಾರಿ ಬಿ.ರಾಮಣ್ಣ, ಆರ್.ಕೆ. ಎರ‌್ರಿಸ್ವಾಮಿ, ಅಯ್ಯಪ್ಪ ಮುಕ್ಕುಂದಿ, ಜೆ.ಚಂದ್ರಶೇಖರ, ಎಚ್.ಸಿ.ಯಾದವ್ ಇತರರಿದ್ದರು.