

ಗಂಗಾವತಿ: ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಳಕ್ಕೆ ಕರಾಟೆ ಕಲೆ ಪೂರಕವಾಗಿದ್ದು, ಆತ್ಮವಿಶ್ವಾಸ ಹೆಚ್ಚಿಸುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್ ಜಾಬಗೌಡರ್ ಹೇಳಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಡ್ರೀಮ್ ವರ್ಲ್ಡ್ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಇಂಡಿಯಾದಿಂದ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ 9ನೇ ಓಪನ್ ಕರಾಟೆ ಚಾಂಪಿಯನ್‌ಶಿಪ್ ಉದ್ಘಾಟಿಸಿ ಮಾತನಾಡಿದರು. ಆತ್ಮರಕ್ಷಣೆಗೆ ಕರಾಟೆ ಕಲೆ ಅನುಕೂಲವಾಗಿದ್ದು, ಗುರುಗಳಿಂದ ಕಲಿತ ಕಲೆಯನ್ನು ದುರುಪಯೋಗ ಮಾಡದೆ ಸ್ವಯಂ ರಕ್ಷಣೆಗೆ ಮಾತ್ರ ಬಳಸಿಕೊಳ್ಳಬೇಕು. ಮಹಿಳೆಯರು ಕರಾಟೆ ಕಲಿಕೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.
ನಗರಸಭೆ ಸದಸ್ಯ ಶಾಮೀದ್ ಮನಿಯರ್ ಮಾತನಾಡಿ, ಕರಾಟೆ ಕಲೆ ಏಕಾಗ್ರತೆ ಹೆಚ್ಚಿಸುತ್ತಿದ್ದು, ದೇಹ ಮತ್ತು ಮನಸನ್ನು ಸದೃಢಗೊಳಿಸಲಿದೆ ಎಂದರು.
ಸಂಪನ್ಮೂಲ ವ್ಯಕ್ತಿ ಮಾಲತೇಶ ಬೆಂಗಳೂರು, ಮುಖಂಡರಾದ ಮಲ್ಲಿಕಾರ್ಜುನ, ಟಿ.ಬಿ.ದೇಸಾಯಿ, ಕಟ್ಟೆ ಸ್ವಾಮಿ, ಇಬ್ರಾಹಿಂಸಾಬ್, ತರಬೇತುದಾರರಾದ ಅಣ್ಣಪ್ಪ, ಡಾ.ಶಿಹಾನ್ ಜಬಿವುಲ್ಲಾ, ಕಲ್ಯಾಣ ಅಪ್ಸಾನಿ, ಅನ್ವರ್ ಪಾಷಾ, ಸೈಯದ್ ಬಿಲಾಲ್, ಲಿಂಗರಾಜು, ಪ್ರೀತಮ್, ವಿಶ್ವಾಸ್, ಸೌಮ್ಯಾ ಇತರರಿದ್ದರು.