ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ ಸಹಕಾರಿ, ಮಾಜಿ ಶಾಸಕ ಪರಣ್ಣಮುನವಳ್ಳಿ ಅನಿಸಿಕೆ

Silver Jubilee Program
ಗಂಗಾವತಿ ಕೆವಿಕೆ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ರಜತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಮಾಜಿ ಶಾಸಕ ಪರಣ್ಣಮುನವಳ್ಳಿ ಉದ್ಘಾಟಿಸಿದರು. ಸಹಕಾರಿ ನಿಯಮಿತ ಕಲಬುರ್ಗಿ ವಿಭಾಗದ ನಿರ್ದೇಶಕ ಶ್ರೀಧರ ಕೇಸರಹಟ್ಟಿ, ಸರ್ಕಾರಿ ಕೃಷಿ ಕಾಲೇಜು ವಿಶೇಷಾಧಿಕಾರಿ ಡಾ.ಎಸ್.ಟಿ.ಯಂಜೇರಪ್ಪ ಇತರರಿದ್ದರು.
Published on

ಗಂಗಾವತಿ: ಜನಪರ ಚಿಂತನೆಯ ಸಹಕಾರ ಕ್ಷೇತ್ರ ಪ್ರಸ್ತುತ ಜನಸಾಮಾನ್ಯರ ಚಳವಳಿಯಾಗಿ ರೂಪುಗೊಂಡಿದ್ದು, ಕೃಷಿ ಕ್ಷೇತ್ರದ ಬೆಳವಣಿಗೆಯತ್ತ ಗಮನಹರಿಸುತ್ತಿದೆ ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.

ನಗರದ ಕೆವಿಕೆ ಸಭಾಂಗಣದಲ್ಲಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ರಜತ ಮಹೋತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕಾಯ್ದೆ ಬದಲಾವಣೆಯಿಂದ ಇಂದು ಸಹಕಾರಿ ಕ್ಷೇತ್ರಕ್ಕೆ ಮಾನ್ಯತೆ ದೊರೆತಿದ್ದು, ಜನರಲ್ಲಿ ವಿಶ್ವಾಸವೂ ಹೆಚ್ಚಿದೆ. ಯುವ ಮತ್ತು ಮಹಿಳಾ ಸಬಲೀಕರಣಕ್ಕೂ ಸಹಕಾರಿ ಕ್ಷೇತ್ರದಲ್ಲಿ ಅವಕಾಶವಿದ್ದು, ಕೃಷಿ ಕ್ಷೇತ್ರದ ಬಲವರ್ಧನೆ ಮತ್ತು ರೈತರ ಅಭಿವೃದ್ಧಿಯತ್ತ ವಿಶೇಷ ಗಮನಹರಿಸಲಾಗುತ್ತಿದೆ ಎಂದರು.

ಸಹಕಾರಿ ನಿಯಮಿತ ಕಲಬುರ್ಗಿ ವಿಭಾಗದ ನಿರ್ದೇಶಕ ಶ್ರೀಧರ ಕೇಸರಹಟ್ಟಿ ಮಾತನಾಡಿ, ಸಹಕಾರಿ ಹಾಗೂ ಕಷಿ ಕ್ಷೇತ್ರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸಿದಾಗ ದೇಶದ ಅಭಿವದ್ಧಿಗೆ ಸಹಕಾರಿಯಾಗಲಿದೆ. ಕಷಿ ಅಧ್ಯಯನದ ವಿದ್ಯಾರ್ಥಿಗಳು ಸಹಕಾರಿ ತತ್ವ ಅಳವಡಿಸಿಕೊಳ್ಳಬೇಕಿದೆ ಎಂದರು.

ಸಹಕಾರಿ ಒಕ್ಕೂಟದ ಮಾಜಿ ಜಿಲ್ಲಾಧ್ಯಕ್ಷ ನಾಗಲಿಂಗಪ್ಪ ಪತ್ತಾರ್, ನಿರ್ದೇಶಕರಾದ ಕುಮಾರಪ್ಪ ಸಿಂಗನಾಳ್, ಲೋಕೇಶ, ಪ್ರಾಂತೀಯ ವ್ಯವಸ್ಥಾಪಕ ಸೂರ್ಯಕಾಂತ್ ರ‌್ಯಾಕಲೆ, ಜಿಲ್ಲಾ ಸೌಹಾರ್ದ ಅಭಿವದ್ಧಿ ಅಧಿಕಾರಿ ಓಂಕಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net