

ಗಂಗಾವತಿ: ನಗರದ ನೆಹರು ಪಾರ್ಕ್ ಅಭಿವೃದ್ಧಿಗೆ ವಿವಿಧ ಸಂಘಟನೆಗಳು ಯೋಜನೆ ರೂಪಿಸಿದ್ದು, ಭಾನುವಾರ ಮೊದಲ ಹಂತದ ಸ್ವಚ್ಛತಾ ಶ್ರಮದಾನ ಕೈಗೊಂಡವು.
ವಿಜಯವಾಣಿ ಪತ್ರಿಕೆ ಫೆ.23 ರಂದು ‘ನೆಹರು ಉದ್ಯಾನ ಅಧ್ವಾನ’ ತಲೆ ಬರಹದಡಿ ವಿಶೇಷ ವರದಿ ಪ್ರಕಟಿಸಿದ ಹಿನ್ನೆಲೆ ಗಂಗಾವತಿ ಚಾರಣ ಬಳಗ, ಪರಿಸರ ಸೇವಾ ಟ್ರಸ್ಟ್, ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ, ರೋಟರಿ ಕ್ಲಬ್ ಮತ್ತು ಶ್ರೀರಾಮನಗರದ ಕ್ಲೀನ್ ಆ್ಯಂಡ್ ಗ್ರೀನ್ ೆರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರಮದಾನದಲ್ಲಿ ಪಾರ್ಕ್‌ನಲ್ಲಿದ್ದ ತ್ಯಾಜ್ಯವನ್ನು ಬೆರೆಡೆ ಸಾಗಿಸಲಾಯಿತು. ಮುರಿದುಹೋದ ರಕ್ಷಣಾ ತಂತಿ ಬೇಲಿಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲಾಯಿತು. ಎಲ್ಲೆಂದರಲ್ಲಿ ಬಿದ್ದಿದ್ದ ಪ್ಲ್ಯಾಸ್ಟಿಕ್ ತ್ಯಾಜ್ಯ ಮತ್ತು ಮದ್ಯದ ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಪಾರ್ಕ್ ಸುತ್ತಲೂ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ಸ್ವಚ್ಛತೆ ಕಾಪಾಡಲು ಮನವಿ ಮಾಡಿ ಉಪಹಾರ ತ್ಯಾಜ್ಯವನ್ನು ಪಾರ್ಕ್ ಒಳಗೆ ಹಾಕದಂತೆ ಸೂಚಿಸಲಾಯಿತು.
ಆರೋಗ್ಯ ನಿರೀಕ್ಷಕ ಎ.ನಾಗರಾಜ್ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಪಾರ್ಕ್ ಮುಂದೆ ಇದ್ದ ತಳ್ಳು ಬಂಡಿಗಳನ್ನು ಜಪ್ತಿ ಮಾಡಿದರು. ಪಾರ್ಕ್ ನಿರ್ವಹಣಾ ಅಧಿಕಾರಿ ನಗರಸಭೆ ಜೆಇ ಇಬ್ರಾಹಿಂ ಸ್ಥಳಕ್ಕೆ ಆಗಮಿಸಿ, ಪಾರ್ಕ್‌ನಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು.
ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ ಮಾಲಿ ಪಾಟೀಲ್ ಮಾತನಾಡಿ, ಸಾರ್ವಜನಿಕರಿಗಾಗಿ ಇರುವ ಪಾರ್ಕ್‌ನ ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದು, ಅನೈತಿಕ ಚಟುವಟಿಕೆಗಳು ನಡೆಯದಂತೆ ಪೊಲೀಸರು ನಿಗಾವಹಿಸಬೇಕು. ನಗರಸಭೆ ವಿದ್ಯುತ್ ದೀಪ, ಹಸೀರಿಕರಣ ಸೇರಿ ಇತರೆ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಸಿಸಿ ಕ್ಯಾಮರಾ ಹಾಗೂ ಸ್ವಚ್ಛತೆಯ ನಾಮಲಕಗಳನ್ನು ಅಳವಡಿಸಬೇಕು. ಪಾರ್ಕ್ ನಿರ್ವಹಣೆಗೆ ಸಂಘಟನೆಗಳ ನೆರವು ಪಡೆಯಲು ಸಲಹೆ ನೀಡಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ಮೈಲಾರಪ್ಪ ಬೂದಿಹಾಳ್, ಪ್ರಹ್ಲಾದ ಕುಲ್ಕರ್ಣಿ, ಮಂಜುನಾಥ ಗುಡ್ಲಾನೂರ್, ಎಸ್.ಪಿ. ಸೌಮ್ಯ, ಹರನಾಯಕ, ಸಂತೋಷ, ಶಿವಕುಮಾರಗೌಡ ಪಾಟೀಲ್, ಪಂಪಾಪತಿ ಇಂಗಳಗಿ, ಮಹ್ಮದ್ ರಫೀ, ಟಿ.ಆಂಜನೇಯ, ರಾಮು, ಶ್ರೀನಿವಾಸ, ವೀರೇಶ, ಇಮಾಮ್‌ಸಾಬ್, ವೀರಣ್ಣ, ರಾಜೇಶ, ಶರ್ೀ, ಶಂಭುಲಿಂಗ, ಲಿಂಗಪ್ಪ, ಯುಗಂಧರ್, ವಿರೂಪಾಕ್ಷಪ್ಪ ದಾಸನಾಳ ಇತರರಿದ್ದರು.
ಪಾರ್ಕ್ ನಿರ್ವಹಣೆಗಾಗಿ ಹೆಚ್ಚುವರಿ ಕಾರ್ಮಿಕರನ್ನು ನಿಯೋಜಿಸಿದ್ದು, ತ್ಯಾಜ್ಯವನ್ನು ಬೇರೆಡೆ ಸಾಗಿಸಲಾಗುವುದು. ಅನೈತಿಕ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಲು ಪೊಲೀಸರ ನೆರವು ಪಡೆಯಲಾಗುವುದು.
ಇಬ್ರಾಹಿಂ
ಜೆಇ, ನಗರಸಭೆ ಗಂಗಾವತಿ