ನಿಷೇಧಿತ ಪ್ಲಾಸ್ಟಿಕ್ ಬಳಸಿದರೆ ಪ್ರಕರಣ ದಾಖಲು, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಎಚ್ಚರಿಕೆ

shops attacked by city administration
ಗಂಗಾವತಿ ಗಾಂಧಿ ವೃತ್ತದ ಬಳಿ ಕಿರಾಣಿ ಅಂಗಡಿಯೊಂದರಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು ನಗರಸಭೆ ಅಧಿಕಾರಿಗಳ ತಂಡ ಮಂಗಳವಾರ ವಶಪಡಿಸಿಕೊಂಡಿತು. ಆರೋಗ್ಯ ನಿರೀಕ್ಷಕರಾದ ಎ.ನಾಗರಾಜ್, ತಳವಾರ ಶೋಭಾ ಇತರರಿದ್ದರು.
Published on

ಗಂಗಾವತಿ: ನಿಷೇಧಿತ ಪ್ಲಾಸ್ಟಿಕ್ ಮಾರಾಟ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿದ್ದು, 40 ಕೆಜಿ ಪ್ಲಾಸ್ಟಿಕ್ ಪ್ರೇರಿತ ವಸ್ತು ಮತ್ತು ಚೀಲಗಳನ್ನು ವಶಪಡಿಸಿಕೊಂಡಿದೆ.

ಪ್ಲಾಸ್ಟಿಕ್ ಬಳಕೆ ನಿಷೇಧ ಹಿನ್ನೆಲೆಯಲ್ಲಿ ಇತ್ತೀಚಿಗೆ ಸ್ಥಳೀಯ ಜೆಎಂಎ್ಸಿ ನ್ಯಾಯಾಧೀಶರ ನೇತೃತ್ವದಲ್ಲಿ ಜಾಗೃತಿ ಅಭಿಯಾನ ನಡೆಸಿದ್ದು, ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟಕ್ಕಾಗಿ ಗಡವು ನೀಡಲಾಗಿತ್ತು. ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವಂತೆ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕ ಎ.ನಾಗರಾಜ್ ನೇತೃತ್ವ ನೈರ್ಮಲ್ಯ ನಿರೀಕ್ಷಕರ ತಂಡ ದಿಢೀರ್ ದಾಳಿ ನಡೆಸಿತು.

ನಗರಸಭೆಯಿಂದ ಗಾಂಧಿ ವೃತ್ತದವರೆಗೆ ನಡೆದ ದಾಳಿಯಲ್ಲಿ 40 ಕೆಜಿ ನಿಷೇಧಿತ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳು ಮತ್ತು ಚೀಲಗಳನ್ನು ವಶಪಡಿಸಿಕೊಂಡಿದ್ದು, 3ಸಾವಿರ ರೂ. ದಂಡ ವಸೂಲಿ ಮಾಡಿದೆ. ಪ್ಲಾಸ್ಟಿಕ್ ಪ್ರೇರಿತ ವಸ್ತುಗಳಿಂದಾಗುವ ಪರಿಸರ ಮತ್ತು ಆರೋಗ್ಯದ ಮೇಲಿನ ಪರಿಣಾಮ ಕುರಿತು ಅಂಗಡಿಕಾರರು ಮತ್ತು ಖರೀದಿದಾರರಲ್ಲಿ ಜಾಗೃತಿ ಮೂಡಿಸಿದ ತಂಡ, ನಗರದಾದ್ಯಂತ ದಾಳಿ ನಡೆಸುವ ಎಚ್ಚರಿಕೆ ನೀಡಿತು.

ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಮಾತನಾಡಿ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳ ಮಾರಾಟ ಸಂಪೂರ್ಣ ನಿಷೇಧಿಸಲಾಗಿದ್ದು, ಖರೀದಿಯೂ ಅಪರಾಧ. ಕರಪತ್ರ, ಭಿತ್ತಿ ಪತ್ರ ಮತ್ತು ಘನತ್ಯಾಜ್ಯ ವಿಲೇವಾರಿ ವಾಹನಗಳ ಮೂಲಕ ಹಲವು ಬಾರಿ ಜಾಗೃತಿ ಮೂಡಿಸಲಾಗಿದೆ. ದಾಳಿ ನಿರಂತರವಾಗಲಿದ್ದು, ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ ಎಂದರು. ಆರೋಗ್ಯ ನಿರೀಕ್ಷಕ ತಳವಾರ ಶೋಭಾ, ಮೇಲ್ವಿಚಾರಕರಾದ ಯೂಸ್ೂ, ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net