ವಚನಗಳು ಸಮಾಜ ಪರಿವರ್ತನೆಗೆ ರಹದಾರಿ

Gangavathi Hadapada appanna jayanti
ಗಂಗಾವತಿ ತಾಲೂಕಿನ ಉಳ್ಳಿಡಗ್ಗಿಯಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಉದ್ಘಾಟಿಸಿದರು. ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಇತರರಿದ್ದರು.
Published on

ಗಂಗಾವತಿ: ವಚನಗಳು ಸಮಾಜ ಪರಿವರ್ತನೆಗೆ ರಹದಾರಿಯಾಗಿದ್ದು, ಶರಣರ ವಚನಗಳಲ್ಲಿ ಬದುಕಿನ ಸಂದೇಶಗಳನ್ನು ಕಾಣಬಹುದು ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಹೇಳಿದರು.

ತಾಲೂಕಿನ ಉಳ್ಳಿಡಗ್ಗಿಯ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸಂಘದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿ ಹಡಪದ ಅಪ್ಪಣ್ಣನವರು ವಚನಗಳ ಮೂಲಕ ಸಾಮಾಜಿಕ ಅಸಮಾನತೆ ತೊಲಗಿಸಲು ಮುಂದಾಗಿದ್ದರು ಎಂದರು.

ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು ಮಾತನಾಡಿ, ವಚನಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ ಎಂದರು. ಕುಂಭ ಮತ್ತು ಜನಪದ ವಾದ್ಯಮೇಳದೊಂದಿಗೆ ಹಡಪದ ಅಪ್ಪಣ್ಣ ಭಾವಚಿತ್ರ ಮೆರವಣಿಗೆ ಮಾಡಲಾಯಿತು.

ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ, ಬಸಾಪಟ್ಟಣ ನಂಜುಂಡೇಶ್ವರ ಮಠದ ಸಿದ್ದಯ್ಯಗುರುವಿನ್, ನಗರಸಭೆ ವಿಪಕ್ಷ ನಾಯಕ ನವೀನ್ ಪಾಟೀಲ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರು ಹಿರೂರ್, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ, ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ, ಪ್ರಮುಖರಾದ ಶಿವಣ್ಣ ನೀಲಕಮಲ್, ವಿಕ್ರಮ ಪಾಟೀಲ್, ಶರಣಬಸವ, ಎಚ್.ಎಂ.ಮಂಜುನಾಥ, ದುರುಗೇಶ ದೊಡ್ಮನಿ, ಚಂದ್ರು, ಯಮನೂರ, ನಾಗರಾಜ, ವಿರೂಪಾಕ್ಷಿ, ಎಚ್.ಅಶ್ವಿನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net