ಶ್ರೀ ಶಾರದಾ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ನವಚಂಡಿ ಹೋಮ

26102020 Gangavathi nava chandi homa
Published on

ಗಂಗಾವತಿ: ಶರನ್ನವರಾತ್ರೋತ್ಸವ ನಿಮಿತ್ತ ನಗರದ ಶಾರದಾ ನಗರದ ಶಂಕರಮಠದ ಶ್ರೀ ಶಾರದಾ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ನವಚಂಡಿ ಹೋಮ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದು, ಮೂರ್ತಿ ಅಭಿಷೇಕ, ಕುಂಕುಮಾರ್ಚನೆ, ಹೋಮ, ಪೂರ್ಣಾಹುತಿ, ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿ ಪಾರಾಯಣ ಸೇರಿ ಸಾಮೂಹಿಕ ಭಜನೆ ನೆರವೇರಿಸಲಾಯಿತು. ಮಹೇಶ ಭಟ್ ಜೋಶಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜೆ ಜರುಗಿದವು. ಮಠದ ಧರ್ಮಾಧಿಕಾರಿ ನಾರಾಯಣರಾವ್ ವೈದ್ಯ, ಮುಖಂಡರಾದ ವಿದ್ಯಾತೀರ್ಥ ನಾರ್ವೆ, ಶ್ರೀಪಾದ ಮುಧೋಳಕರ್, ವಿಶ್ವನಾಥ ಅಳವಂಡಿ, ಶ್ರೀಧರ ಅಳವಂಡಿ, ಬಾಲಕೃಷ್ಣ ದೇಸಾಯಿ, ಬಿ.ವಿ.ಜೋಶಿ, ಶೇಷಗಿರಿ, ಸುದರ್ಶನ ವೈದ್ಯ ಇತರರಿದ್ದರು.

ಹೇಮಗುಡ್ಡ: ತಾಲೂಕಿನ ಹೇಮಗುಡ್ಡದ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರೋತ್ಸವ ನಿಮಿತ್ತ ಆಯುಧ ಪೂಜೆ ನೆರವೇರಿಸಲಾಯಿತು. 9 ದಿನ ಕಠಿಣವ್ರತದೊಂದಿಗೆ ಆರಂಭವಾಗಿದ್ದು, ಚಂಡಿ ಹೋಮದೊಂದಿಗೆ ಸಂಪನ್ನಗೊಳಿಸಲಾಯಿತು.

ಮಾಜಿ ಸಂಸದ ಎಚ್.ಜಿ.ರಾಮುಲು, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಸದ ಕರಡಿಸಂಗಣ್ಣ, ಶಾಸಕ ಪರಣ್ಣಮುನವಳ್ಳಿ, ಮಾಜಿ ಎಂಎಲ್ಸಿ ಕರಿಯಣ್ಣಸಂಗಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net