ಶರಣಬಸವೇಶ್ವರ ರಥೋತ್ಸವ ಅದ್ದೂರಿ

Chariot Festival
ಗಂಗಾವತಿ ತಾಲೂಕಿನ ಢಣಾಪುರದ ಶ್ರೀ ಶರಣಬಸವೇಶ್ವರ ಮಹಾರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.
Published on

ಗಂಗಾವತಿ: ತಾಲೂಕಿನ ಢಣಾಪುರದ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವ ನಿಮಿತ್ತ ಮಹಾರಥೋತ್ಸವ ಭಾನುವಾರ ಅದ್ದೂರಿಯಾಗಿ ಜರುಗಿತು.

ದೇವಾಲಯದಲ್ಲಿ 11 ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, 50ನೇ ವರ್ಷದ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಹೋಮ, ಕುಂಭ, ಕಳಶ, ವಾದ್ಯಮೇಳದೊಂದಿಗೆ ಗಂಗೆ ಸ್ಥಳಕ್ಕೆ ಹೋಗುವುದು, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕ ವಿವಾಹದಲ್ಲಿ 3 ಜೋಡಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದವು. ಇದೇ ಸಂದರ್ಭದಲ್ಲಿ ಪ್ಲ್ಯಾಸ್ಟಿಕ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಂಜೆ ಸರ್ವಾಲಂಕೃತ ರಥೋತ್ಸವನ್ನು ಪಾದಗಟ್ಟೆವರೆಗೆ ಅಪಾರ ಭಕ್ತ ಸಮೂಹದೊಂದಿಗೆ ನೆರವೇರಿಸಲಾಯಿತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು, ಅಯೋಧ್ಯ ಹಾಲುಮಠದ ಶ್ರೀಗಳು, ತಿರುಪತೆಪ್ಪ ಸ್ವಾಮೀಜಿ ಸೇರಿ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು, ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net