ಕಾವ್ಯಗಳಲ್ಲಿ ಅಡಗಿದೆ ಕನ್ನಡ ನಾಡು-ನುಡಿಯ ಶ್ರೀಮಂತಿಕೆ

Gangavathi kavi-kavya sammelana
ಗಂಗಾವತಿ ಚನ್ನಬಸವ ಕಲಾಮಂದಿರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ರಾಜ್ಯಮಟ್ಟದ ಕವಿ- ಕಾವ್ಯ ಸಮ್ಮೇಳನ ಸಮಾರಂಭವನ್ನು ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಉದ್ಘಾಟಿಸಿದರು. ಸಮೇಳನಾಧ್ಯಕ್ಷ ಡಾ.ಜಾಜಿ ದೇವೇಂದ್ರಪ್ಪ, ಪರಿಷತ್ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ ಇತರರಿದ್ದರು.
Published on

ಗಂಗಾವತಿ: ಸಾಮಾಜಿಕ ಸಮಸ್ಯೆಗಳಿಗೆ ಕವಿಗಳು ವೇದಿಕೆಯಾಗಬೇಕಿದ್ದು, ಕಾವ್ಯ ರಚನೆಯ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ ರಂಜಾನ್ ದರ್ಗಾ ಹೇಳಿದರು.

ನಗರದ ಚನ್ನಬಸವ ಕಲಾಮಂದಿರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ ಅಖಿಲ ಕರ್ನಾಟಕ ರಾಜ್ಯಮಟ್ಟದ 4ನೇ ಕವಿ-ಕಾವ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ನಾಡಿನ ಸಾಹಿತಿಗಳು ಸಾಹಿತ್ಯ, ಕಾವ್ಯಗಳಲ್ಲಿ ನಾಡಿನ ಶ್ರೀಮಂತಿಕೆ, ಜ್ವಲಂತ ಸಮಸ್ಯೆ, ಪರಂಪರೆ ಸೇರಿ ಎಲ್ಲವನ್ನೂ ತೆರೆದಿಟ್ಟಿದ್ದಾರೆ. ಆದರೇ ಜನರು ನೋಡುವ ದೃಷ್ಟಿ ಬದಲಾಗಿದೆ. ಇತ್ತೀಚೆಗೆ ವಿದ್ಯಾವಂತರು ಬುದ್ಧಿಹೀನರಂತೆ, ತತ್ವ ಸಾಧಕರು ಭಕ್ತಿಹೀನರಂತೆ, ಲಿಂಗಸಾಧಕರು ಭೂಮಾಲಿಕರಾಗಿ ಬದಲಾಗಿದ್ದು, ಇಂಥವರ ಕೆಲ ವಿಚಾರಗಳು, ಹೇಳಿಕೆಗಳು ಲೇಖಕರ ವಿರುದ್ಧ ದ್ವೇಷದ ಸಂಸ್ಕೃತಿ ಬಿತ್ತುವಂತೆ ಇರುತ್ತಿವೆ ಎಂದರು.

ಕವಿ-ಕಾವ್ಯ ಸಮ್ಮೇಳನದ ಅಧ್ಯಕ್ಷ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಚನಕಾರರು ಸಾಹಿತ್ಯದ ಮೂಲಕ ಜಾತಿ, ವರ್ಗ, ವರ್ಣ, ಲಿಂಗಬೇಧರಹಿತ ಸಮಾಜ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 18ನೇ ಶತಮಾನದಿಂದಲೇ ಸಂಘರ್ಷ ತಡೆಗೆ ಸಾಹಿತ್ಯ ಬಳಸಲಾಗಿತ್ತು. ಹೊಸ ತಲೆಮಾರಿನ ಕನ್ನಡ ಕಾವ್ಯ ರಚನೆಗೆ ಸಾಕಷ್ಟು ಕವಿಗಳು ಭರವಸೆ ಮೂಡಿಸುತ್ತಿದ್ದಾರೆ. ಕಾವ್ಯ ಒಂದು ಗಂಭೀರ ತಪಸ್ಸು, ಅದು ಹೊಸ ಹೊಸ ರೂಪಕ ಉಪಮೆಗಳಿಂದ ಈ ಕಾಲದ ಸತ್ಯಗಳನ್ನು ಅಭಿವ್ಯಕ್ತಿಸಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಕವಿ-ಕಾವ್ಯ ಸಮ್ಮೇಳನ ಅಧ್ಯಕ್ಷ ಡಾ. ಜಾಜಿ ದೇವೇಂದ್ರಪ್ಪ ,ಪತ್ನಿ ಸುಪ್ರಿಯಾ ಅವರನ್ನು ತೆರೆದ ವಾಹನದಲ್ಲಿ ಸಮ್ಮೇಳನದ ವೇದಿಕೆವರೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು. ವಿವಿಧ ಲೇಖಕರ ಪುಸ್ತಕ, ಕವಿಗಳ ಕವನ ಸಂಕಲನಗಳನ್ನು ಬಿಡುಗಡೆಗೊಳಿಸಲಾಯಿತು.

ಹಾಸ್ಯ ಭಾಷಣಕಾರ ಬಿ.ಪ್ರಾಣೇಶ, ಜಿಲ್ಲಾ ಘಟಕದ ಅಧ್ಯಕ್ಷೆ ಅನಸೂಯಾ ಜಾಹಗೀರದಾರ, ಪದಾಧಿಕಾರಿಗಳಾದ ಶರಣಪ್ಪ ತಳ್ಳಿ, ಕುಪ್ಪಿಗುಡ್ಡ, ಮಹಾಲಕ್ಷ್ಮೀ ಕೆಸರಹಟ್ಟಿ, ಶೈಲಜಾ ಹಿರೇಮಠ, ಇಮಾಮ್ ಸಾಹೇಬ ಹಡಗಲಿ, ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ, ಕವಿಗಳಾದ ಬಿ.ಸಿ.ಐಗೋಳ, ರಮೇಶ ಗಬ್ಬೂರು, ನಾಗಭೂಷಣ ಅರಳಿ, ಹನುಮಂತ ಹೇರೂರು, ಅಶೋಕ ರಾಯ್ಕರ್, ಯಮನೂರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net