ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ಸ್-ಗೈಡ್ಸ್ ಪೂರಕ

ಗಂಗಾವತಿ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ(ಸಿಪಿಎಸ್)ಯಲ್ಲಿ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡ ಬೇಸಿಗೆ ಉಚಿತ ತರಬೇತಿ ಶಿಬಿರವನ್ನು ನಗರಸಭೆ ಮಾಜಿ ಸದಸ್ಯ ಸಿದ್ದಾಪುರ ರಾಚಪ್ಪ ಶನಿವಾರ ಉದ್ಘಾಟಿಸಿದರು. ಮುಖ್ಯಶಿಕ್ಷಕ ಶಿವಪುತ್ರಪ್ಪ ಹೊಸ್ಮನಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಸೈಯ್ಯದ್ ಮೊಹಮ್ಮದ್ ಗುತ್ತಿ, ಕಾರ್ಯದರ್ಶಿ ಹುಸೇನ್‌ಸಾಬ್ ಮಕಾನ್‌ದಾರ್ ಇತರರಿದ್ದರು.

Published on

ಗಂಗಾವತಿ: ಶಿಸ್ತು, ಕ್ರಿಯಾಶೀಲತೆ ಹೆಚ್ಚಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಪಡೆದವರಿಗೆ ಎಲ್ಲ ಕ್ಷೇತ್ರದಲ್ಲೂ ಮಾನ್ಯತೆಯಿದ್ದು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲು ದೊರೆಯಲಿದೆ ಎಂದು ನಗರಸಭೆ ಮಾಜಿ ಸದಸ್ಯ ರಾಚಪ್ಪ ಸಿದ್ದಾಪುರ ಹೇಳಿದರು.

ನಗರದ ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ(ಸಿಪಿಎಸ್)ಯಲ್ಲಿ ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಹಮ್ಮಿಕೊಂಡ ಬೇಸಿಗೆ ಉಚಿತ ತರಬೇತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ಪೂರಕವಾಗಿದ್ದು, ಉತ್ತಮ ಸಂಸ್ಕಾರ ಪಡೆಯಬಹುದಾಗಿದೆ ಎಂದರು.

ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಹುಸೇನ್‌ಸಾಬ್ ಮಕಾನ್‌ದಾರ್ ಮಾತನಾಡಿ, ಎರಡು ದಿನಗಳ ತರಬೇತಿ ಶಿಬಿರದಲ್ಲಿ ಕಬ್, ಬುಲ್, ಸ್ಕೌಟ್ಸ್, ಗೈಡ್ಸ್, ರೋವರ್ಸ್, ರೇಂಜರ್ಸ್‌ಗಳಗೆ ತರಬೇತಿ ನೀಡಲಾಗುವುದು ಎಂದರು.

ತರಬೇತುದಾರರಾದ ಯರ‌್ರೆಣ್ಣ, ರೀದಾ ಅಖ್ತರ್, ಶ್ರೀದೇವಿ ತಟ್ಟಿ, ಸುಮಾ, ಜ್ಯೋತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net