ಮೌನ ಧರಣಿಗೆ ಶಿಕ್ಷಕನ ಅಮಾನತು ಸಲ್ಲದು

MANAVI SALIKE
ಗಂಗಾವತಿ ಬಿಇಒ ಕಚೇರಿ ಅಧೀಕ್ಷಕ ಶಿವಪ್ರಸಾದ್‌ಗೆ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಯು.ನಾಗರಾಜ್,ಕಾರ್ಯದರ್ಶಿ ಜಿ.ಬಾಲಾಜಿ ಚಳ್ಳಾರಿ,ಸದಸ್ಯರಾದ ಮೌನೇಶ, ಲತ್ೀ, ಶರಣಬಸವ, ಹನುಮೇಶ ಇತರರಿದ್ದರು.
Published on

ಗಂಗಾವತಿ: ಮಕ್ಕಳ ಕಲಿಕೆಗಾಗಿ ಶಾಲಾ ಕೊಠಡಿ ಕೇಳಿದ ಶಿಕ್ಷಕನನ್ನು ಅಮಾನತುಗೊಳಿಸಿದ ಸರ್ಕಾರದ ಕ್ರಮ ಖಂಡಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂಭಾಗ ಬುಧವಾರ ಪ್ರತಿಭಟಿಸಿದರು.

ತಾಲೂಕು ಕಾರ್ಯದರ್ಶಿ ಜಿ.ಬಾಲಾಜಿ ಚಳ್ಳಾರಿ ಮಾತನಾಡಿ, ಮಕ್ಕಳ ಸಂಖ್ಯೆ ಅನುಗುಣ ಭೌತಿಕ ಕಟ್ಟಡ ಒದಗಿಸುವುದು ಸರ್ಕಾರ ಕರ್ತವ್ಯವಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕಿದೆ.

ರಾಯಭಾಗ ತಾಲೂಕಿನ ನಿಡಗುಂದಿ ಸಪ್ರಾ ಶಾಲೆಗೆ ಮಂಜೂರಾದ ತರಗತಿ ಕೊಠಡಿಗಳಿಗಾಗಿ ಮೂರು ವರ್ಷದಿಂದ ಶಿಕ್ಷಕ ವೃಂದ ಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಮಕ್ಕಳ ಅನುಕೂಲಕ್ಕಾಗಿ ಶಿಕ್ಷಕ ವೀರಣ್ಣ ಮಡಿವಾಳ ಅವರು ವಿದ್ಯಾರ್ಥಿಗಳೊಂದಿಗೆ ಬಿಇಒ ಕಚೇರಿವರೆಗೆ ಮೌನ ಜಾಥಾ ಧರಣಿ ನಡೆಸಿದ್ದರು.

ಮಕ್ಕಳಿಗಾಗಿ ಧ್ವನಿ ಎತ್ತಿದ ಕಾರಣಕ್ಕಾಗಿ ಸರ್ಕಾರ ಅಮಾನತುಗೊಳಿಸಿರುವುದು ಖಂಡನೀಯವಾಗಿದ್ದು, ಶಿಕ್ಷಕ ಬೆಂಬಲಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಮಾನತು ಆದೇಶ ಕೂಡಲೇ ಹಿಂಪಡೆಯಬೇಕು ಒತ್ತಾಯಿಸಿದರು. ತಾಲೂಕಾಧ್ಯಕ್ಷ ಯು.ನಾಗರಾಜ್, ಸದಸ್ಯರಾದ ಮೌನೇಶ, ಲತ್ೀ, ಶರಣಬಸವ, ಹನುಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net