

ಗಂಗಾವತಿ: ವ್ಯಕ್ತಿ ಮತ್ತು ರಾಷ್ಟ್ರದ ವಿಕಾಸಕ್ಕೆ ಸಂವಿಧಾನ ಪೂರಕವಾಗಿದ್ದು, ಪ್ರತಿಯೊಬ್ಬರಿಗೂ ಪ್ರಕೃತಿದತ್ತವಾದ ಜೀವಿಸುವ ಹಕ್ಕನ್ನು ಪ್ರತಿಪಾದಿಸಿದೆ ಎಂದು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಹೇಳಿದರು.
ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವತಂತ್ರ ಭಾರತದ ಪರಂಪರೆ ಮತ್ತು ಭವಿಷ್ಯತ್ವ ಕಟ್ಟಲು ಸಂವಿಧಾನ ರೂಪಿಸಲಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಅವರ ದೂರದೃಷ್ಟಿಯಿಂದ ಸರ್ವರಿಗೂ ಸಮಾನತೆ, ಸರ್ವಸ್ವತಂತ್ರೃ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ದೊರಕಿದೆ ಎಂದರು.
ಸಂಘದ ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎ.ಜಿ.ಕಾರಟಗಿ, ನವಜೀವನ ವದ್ದಾಶ್ರಮದ ಸ್ಥಾಪಕ ಆನಂದರಾವ್ ಮುಳ್ಳಪುಡಿ, ಸಂಘದ ಅಧೀಕ್ಷಕ ಯು.ಎಂ.ಅನಿಲಕುಮಾರ ಸೇರಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಪದಾಧಿಕಾರಿಗಳಾದ ಗುಂಜಳ್ಳಿ ರಾಜಶೇಖರಪ್ಪ ,ಸುರೇಶ ಸಿಂಗನಾಳ,ಕಳಕನಗೌಡ ಪಾಟೀಲ್, ಲಿಂಗಪ್ಪ ಕಮತಗಿ, ಗುಂಜಳ್ಳಿ ತಿಪ್ಪೇಶ, ಪ್ರಾಚಾರ್ಯರಾದ ಡಾ.ಶರಣಬಸಪ್ಪ ಕೋಲ್ಕಾರ್, ಪ್ರೊ. ಬಸವರಾಜ್ ಅಯೋಧ್ಯಾ, ವಿ.ಜಿ.ಯಾವ್ಗಲ್, ಡಾ. ಎನ್.ರವಿ ಚವ್ಹಾಣ್ ಇತರರಿದ್ದರು.
ರೋಟರಿ ಕ್ಲಬ್: ನಗರದ ವಾಲ್ಮೀಕಿ ವೃತ್ತದ ಬಳಿ ಬೆಂಡರವಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ರೋಟರಿ ಕ್ಲಬ್‌ನಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷೆ ನಮಿತಾ ಧ್ವಜಾರೋಹಣ ನೆರವೇರಿಸಿದರು. ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಟಿ.ಆಂಜನೇಯ ಮಾತನಾಡಿದರು. ಕಾರ್ಯದರ್ಶಿ ವಾಸು ಕೊಳಗದ್, ಪದಾಧಿಕಾರಿಗಳಾದ ಶ್ರೀಧರ್ ನಾಯಕ, ಮಹೇಶ್ ಸಾಗರ್, ಅಜಿತ್ ರಾಜ್ ಸುರಾನ, ಜೆ.ನಾಗರಾಜ, ಉಗಮರಾಜ್, ಪ್ರಕಾಶ್ ಚೋಪ್ರ ಎಂ.ಗುರುರಾಜ್, ವೀರೇಶ್ ಅರಿಕೇರಿ, ಬಸವರಾಜ, ಡಾ.ವೀರನಗೌಡ, ದಿಲೀಪ್ ಮೋಥಾ, ಮುಖ್ಯಶಿಕ್ಷಕಿ ಶಶಿಕಲಾ, ಶಿಕ್ಷಕಿಯರಾದ ಇಂದಿರಾ, ಶಿಲ್ಪಾ, ಜಮೀಲಾ ಇತರರಿದ್ದರು.
ಇಲಾಹಿ ಕಾಲನಿ: ನಗರದ ಇಲಾಹಿ ಕಾಲನಿಯ ಪ್ರತಿಭಾ ಹಿ.ಪ್ರಾ ಮತ್ತು ಪ್ರೌಢ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಶಾಲಾಡಳಿತ ಮಂಡಳಿ ಅಧ್ಯಕ್ಷೆ ಪುಟ್ಟಮ್ಮ ಗಿಡ್ಡಿ, ಕಾರ್ಯದರ್ಶಿ ಎಚ್.ಅರುಣ ಗಿಡ್ಡಿ, ಸದಸ್ಯೆ ಶಶಿಕಲಾ ಗಿಡ್ಡಿ, ಮುಖ್ಯಶಿಕ್ಷಕ ಕೆ.ಚನ್ನಪ್ಪ , ಶಿಕ್ಷಕರಾದ ಕೆಂಚಪ್ಪ ಮಾಳಮ್ಮನವರ್, ಮಂಜುನಾಥ, ಬಿ.ಜ್ಯೋತಿ, ಜಗನ್ನಾಥ ಬಾಬು, ಶಿವಲೀಲಾ, ದ್ರಾಕ್ಷಾಯಣಿ ಇತರರಿದ್ದರು.