ಪಡಿತರ ವಿತರಕರ ಕಮಿಷನ್ ಹೆಚ್ಚಿಸಿ, ಸರ್ಕಾರಕ್ಕೆ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಒತ್ತಾಯ

meeting
ಗಂಗಾವತಿ ಟಿಎಪಿಸಿಎಂಎಸ್ ಆವರಣದ ಸರ್ಕಾರಿ ಪಡಿತರ ವಿತರಕರ ಸಂಘದ ತಾಲೂಕು ಘಟಕದ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ವಿತರಕರ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಸೋಮವಾರ ಮಾತನಾಡಿದರು. ತಾಲೂಕು ಗೌರವಾಧ್ಯಕ್ಷ ಟಿ.ಎಂ.ಶಾಸಿ, ಅಧ್ಯಕ್ಷ ಕೆ.ಮಂಜುನಾಥ ಇತರರಿದ್ದರು.
Published on

ಗಂಗಾವತಿ: ನಗರದ ಟಿಎಪಿಸಿಎಂಎಸ್ ಆವರಣದ ಸರ್ಕಾರಿ ಪಡಿತರ ವಿತರಕರ ಸಂಘದ ತಾಲೂಕು ಘಟಕದ ಕಚೇರಿಯಲ್ಲಿ ತಾಲೂಕು ಮಟ್ಟದ ವಿತರಕರ ಸಭೆ ಸೋಮವಾರ ನಡೆಯಿತು. ವಿತರಕರ ಸಮಸ್ಯೆ, ಪರಿಹಾರ, ಕಮಿಷನ್ ಹೆಚ್ಚಳ ಮತ್ತು ಅಕ್ಕಿ ಇತರ ವಸ್ತುಗಳನ್ನು ಪಡಿತರ ವಿತರಕರ ಮೂಲಕವೇ ವಿತರಿಸುವ ಬಗ್ಗೆ ಚರ್ಚಿಸಲಾಯಿತು.

ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನ್ನಭಾಗ್ಯ ಯೋಜನೆಗಳನ್ನು ವಿತರಕರು ಸಮರ್ಪಕ ಅನುಷ್ಠಾನಗೊಳಿಸುತ್ತಿದ್ದು, ಸರ್ಕಾರ ಮತ್ತು ಜನರ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿತರಕ ಕಮಿಷನ್ ಹಣ ಹೆಚ್ಚಳ, ಕೇಂದ್ರ ಸರ್ಕಾರದ ಭಾರತ್ ರೈಸ್, ದಾಲ್ ಮತ್ತು ಎಣ್ಣೆ ಇತರ ಆಹಾರ ಪದಾರ್ಥಗಳನ್ನು ಕಡಿಮೆ ದರ ನಿಗದಿಪಡಿಸಿ, ಬಡವರಿಗೆ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸುವ ವ್ಯವಸ್ಥೆಯಾಗಬೇಕು.

ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪರೊಂದಿಗೆ ರಾಜ್ಯಮಟ್ಟದ ಸಭೆ ಇದೇ ತಿಂಗಳು ಆಯೋಜಿಸಲಾಗುತ್ತಿದ್ದು, ಶೀಘ್ರವೇ ದಿನಾಂಕ ತಿಳಿಸಲಾಗುವುದು. ರಾಜ್ಯದ ಎಲ್ಲ ವಿತರಕರು ಭಾಗಹಿಸುವ ಮೂಲಕ ಸರ್ಕಾರಕ್ಕೆ ಒತ್ತಡ ಹಾಕೋಣ ಎಂದರು.

ಸಂಘದ ತಾಲೂಕು ಗೌರವಾಧ್ಯಕ್ಷ ಟಿ.ಎಂ.ಶಾಸಿ, ಅಧ್ಯಕ್ಷ ಕೆ.ಮಂಜುನಾಥ, ಪದಾಧಿಕಾರಿಗಳಾದ ಎಂ.ಪಂಪನಗೌಡ, ಎಂ.ಡಿ. ಯಾಜ್, ಎಚ್.ವೀರಭದ್ರಪ್ಪ , ರಾಜಶೇಖರ್ ಬೆಳಗೋಡ, ಟಿ.ಜಿ. ಬಾಬು, ಚನ್ನಯ್ಯಸ್ವಾಮಿ, ವಸಂತಗೌಡ,ವಿ.ಬಿ.ನಜೀರ್, ನಾಗರಾಜನಾಯಕ, ಅಯಾಜ್ ಮಾಸೂಂ ಶರ್ೀ, ಉಮೇಶ, ಹಾಲಯ್ಯ ಹುಡೇಜಾಲಿ, ಛತ್ರಪ್ಪ ಛಲವಾದಿ, ನಾಗರಾಜ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net