ರಂಗನಾಥಸ್ವಾಮಿ ಹುಂಡಿಯಲ್ಲಿ 1.31ಲಕ್ಷ ರೂ. ಸಂಗ್ರಹ

Anegundi Ranganatha Swami Hundi Count
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ಶ್ರೀರಂಗನಾಥಸ್ವಾಮಿ ಮತ್ತು ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯದ ಹುಂಡಿ ಹಣ ಎಣಿಕೆ ಗುರುವಾರ ನಡೆಯಿತು.
Published on

ಗಂಗಾವತಿ: ತಾಲೂಕಿನ ಆನೆಗೊಂದಿ ಬಳಿಯ ಶ್ರೀರಂಗನಾಥಸ್ವಾಮಿ ಮತ್ತು ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯದ ಹುಂಡಿಯಲ್ಲಿ 3.92ಲಕ್ಷ ರೂ. ಸಂಗ್ರಹವಾಗಿದೆ.

ಪಂಪಾಸರೋವರದ ಶ್ರೀ ಜಯಲಕ್ಷ್ಮೀ ದೇವಾಲಯದಲ್ಲಿ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಎರಡೂ ದೇವಾಲಯದ ಹುಂಡಿ ಎಣಿಕೆ ಮಾಡಿದರು. ಹತ್ತು ತಿಂಗಳ ಅವಧಿಯಲ್ಲಿ ಆನೆಗೊಂದಿ ರಂಗನಾಥಸ್ವಾಮಿ ದೇಗುಲದಲ್ಲಿ 1.31ಲಕ್ಷ ರೂ. ಮತ್ತು ಜಯಲಕ್ಷ್ಮೀ ದೇವಾಲಯದಲ್ಲಿ 2.61 ಲಕ್ಷ ರೂ. ಸಂಗ್ರಹವಾಗಿದ್ದು, ನೇಪಾಳ ದೇಶದ ನಾಣ್ಯ, ನೋಟುಗಳು ಪತ್ತೆಯಾಗಿವೆ. ಈ ಹಿಂದೆ ಎರಡು ದೇವಾಲಯದ ಹುಂಡಿ ತೆರೆದಾಗ 1.64 ಲಕ್ಷ ರೂ. ಸಂಗ್ರಹವಾಗಿತ್ತು.

ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದ್ದು, ದೇವಾಲಯದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು. ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಗ್ರಾಮಲೆಕ್ಕಾಧಿಕಾರಿ ಮಹಾಲಕ್ಷ್ಮೀ ನಾಯಕ, ಆನೆಗೊಂದಿ ಎಸ್‌ಬಿಐ ವ್ಯವಸ್ಥಾಪಕ ರಂಜಿತ್, ಪೇದೆ ವಿಶ್ವನಾಥ, ಮುಖಂಡ ಕುಪ್ಪರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net