ಆಸ್ತಿ ದಾಖಲೆ ನೀಡದ ನಗರಸಭೆ: ಅನಿರ್ದಿಷ್ಟಾವಧಿ ಧರಣಿ ಕೈಗೊಂಡ ಕುಟುಂಬ

040222 Gangavati Balikatti Family Strike
ಗಂಗಾವತಿ ನಗರಸಭೆ ಕಚೇರಿ ಎದುರು ಶುಕ್ರವಾರ ದಾಕ್ಷಾಯಿಣಿ ಬಾಳಿಕಟ್ಟಿ ಕುಟುಂಬ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.
Published on

ಗಂಗಾವತಿ: ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿ ದಾಕ್ಷಾಯಿಣಿ ಭಾಸ್ಕರ ಬಾಳಿಕಟ್ಟಿ ಕುಟುಂಬ ಸದಸ್ಯರು ಶುಕ್ರವಾರ ನಗರಸಭೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು.

ದಾಕ್ಷಾಯಿಣಿ ಮಾತನಾಡಿ, ವಿರುಪಾಪುರದಲ್ಲಿ ಆಸ್ತಿ ಸಂ.5-1-155/20 ಸಂಬಂಧಿಸಿದ 5-1-248 ದಾಖಲಾತಿಗಳು ನಮ್ಮ ಕುಟುಂಬದ ಹೆಸರಿನಲ್ಲಿದ್ದು, ಬೇರೆಯವರು ಮನೆ ನಿರ್ಮಿಸಿಕೊಂಡಿದ್ದಾರೆ. ಈ ಆಸ್ತಿಗೆ ಸಂಬಂಧಿಸಿದ ದಾಖಲಾತಿಗಳ ಬಗ್ಗೆ ವಿವರಣೆ ನೀಡುವಂತೆ ನಗರಸಭೆಗೆ 3 ವರ್ಷದಿಂದ ಅಲೆದಾಡಿದರೂ ಪ್ರಯೋಜನವಾಗಿಲ್ಲ. ಪ್ರಾದೇಶಿಕ ಆಯುಕ್ತರ ಆದೇಶಕ್ಕೂ ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಹಾರ ಸಿಗುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದರು. ಕುಟುಂಬ ಸದಸ್ಯರಾದ ಭಾಸ್ಕರ, ತುಂಗಮ್ಮ, ಮಂಜುನಾಥ ಇದ್ದರು. ಧರಣಿಗೆ ವಕೀಲ ಬಸಪ್ಪ ಅಳ್ಳಳ್ಳಿ ಮತ್ತು ನಿವೃತ್ತ ಅಧಿಕಾರಿ ಗೋಪಾಲಕೃಷ್ಣ ಬೆಂಬಲ ವ್ಯಕ್ತಪಡಿಸಿದ್ದು, ಪರಿಹಾರ ಸಿಗುವವರೆಗೆ ಜತೆಗಿರುತ್ತೇವೆ ಎಂದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೆ. ಗಂಗಣ್ಣ ಮಾತನಾಡಿ, ಅರ್ಜಿದಾರರ ಮನವಿಯಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ೆ.17ರಂದು ಕೋರ್ಟ್ ಕಲಾಪವಿದೆ. ಅರ್ಜಿದಾರರು, ಉದ್ದೇಶಿತ ಸ್ಥಳದಲ್ಲಿ ವಾಸವಾಗಿರುವ ವ್ಯಕ್ತಿಗಳು ಮತ್ತು ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net